ಮುಂಬೈ

ಮುಂಬೈ ಸರಣಿ ಸ್ಫೋಟ: ಜೈಲಿನಲ್ಲಿಯೇ ಸಾವನ್ನಪ್ಪಿದ ಯಾಕೂಬ್ ಮೆಮನ್‌ ಸಹೋದರ ಯೂಸುಫ್‌ ಮೆಮನ್

Pinterest LinkedIn Tumblr


ಮುಂಬಯಿ: 1993ರ ಮುಂಬಯಿ ಸರಣಿ ಸ್ಫೋಟದ ಅಪರಾಧಿಗಳಲ್ಲಿ ಒಬ್ಬನಾದ ಹಾಗೂ ಟೈಗರ್‌ ಮೆಮನ್ ಕಿರಿಯ‌ ಸಹೋದರ‌ ಯೂಸುಫ್ ಮೆಮನ್ ಮುಂಬೈನ ನಾಸಿಕ್ ಜೈಲಿನಲ್ಲಿ ಶುಕ್ರವಾರ ಸಾವಿಗೀಡಾಗಿದ್ದಾನೆ.

ಜೈಲಿನಲ್ಲಿ ಯೂಸುಫ್‌ ಮೆಮನ್‌ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧುಲೆಗೆ ಕಳುಹಿಸಲಾಗಿದ್ದು, ಸಾವಿನ ಕಾರಣ ಇನ್ನು ತಿಳಿದುಬಂದಿಲ್ಲ. ನಾಶಿಕ್‌ ಪೊಲೀಸ್‌ ಆಯುಕ್ತ ವಿಶ್ವಾಸ್‌ ನಾಂಗ್ರೆ ಪಾಟೀಲ್‌ ಮೆಮನ್‌ ಸಾವನ್ನು ಖಚಿತಪಡಿಸಿದ್ದಾರೆ.

ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವುದ್‌ ಇಬ್ರಾಹಿಂಗೆ ಸಹಕಾರ ನೀಡಿದ್ದ ಆರೋಪ ಇವನ ಮೇಲಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಮನ್‌ನ ತಂದೆ ಅಬ್ದುಲ್ ರಜಾಕ್ ಮೆಮನ್‌ ಮತ್ತು ತಾಯಿ ಹನೀಫಾ ಸೇರಿ ಮೆಮನ್ ಕುಟುಂಬದ ಆರು ಮಂದಿಯನ್ನು ಸಿಬಿಐ 1994ರಲ್ಲಿ ಬಂಧಿಸಿತ್ತು

ಟಾಡಾ ವಿಶೇಷ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿತ್ತು. ಯೂಸುಫ್ ಮೆಮನ್‌ನ ಹಿರಿಯ ಸಹೋದರ ಯಾಕೂಬ್ ಮೆಮನ್‌ನನ್ನು 2015ರಲ್ಲಿ ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಮಾರ್ಚ್‌ 12, 1993ರಲ್ಲಿ ಮುಂಬೈನಲ್ಲಿ 12 ಕಡೆ ಸರಣಿ ಸ್ಫೋಟದಲ್ಲಿ 250 ಜನ ಸಾವನ್ನಪ್ಪಿದ್ದರು.

Comments are closed.