ಮುಂಬೈ

ಜಿಯೋಗೆ ಮತ್ತೊಂದು ಸಂಸ್ಥೆ ADAIನಿಂದ 5,683 ಕೋಟಿ ರೂ ಹೂಡಿಕೆ

Pinterest LinkedIn Tumblr


ಮುಂಬೈ(ಜೂನ್ 07): ಸಾಲದ ಹೊರೆಯನ್ನು ತಗ್ಗಿಸಲು ವಿವಿಧ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುವ ರಿಲಾಯನ್ಸ್ ಜಿಯೋ ಈ ನಿಟ್ಟಿನಲ್ಲಿ ಮತ್ತೊಂದು ದೃಢ ಹೆಜ್ಜೆ ಇಟ್ಟಿದೆ. ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ (IDAI) ಜಿಯೋದಲ್ಲಿ ಶೇ. 1.16ರಷ್ಟು ಪಾಲು ಖರೀದಿಸಲು ನಿರ್ಧರಿಸಿದೆ. ಇದರೊಂದಿಗೆ ಐಡಿಎಐನಿಂದ 5,683 ಕೋಟಿ ರೂ ಬಂಡವಾಳ ಹೂಡಿಕೆ ಆಗಲಿದೆ.

ರಿಲಾಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡುತ್ತಿರುವುದು ಅಥವಾ ಪಾಲು ಖರೀದಿ ಮಾಡುತ್ತಿರುವುದು ಇದು 7ನೇ ಸಂಸ್ಥೆಯಾಗಿದೆ. ಫೇಸ್​ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ ಮತ್ತು ಈಗ ಅಬುಧಾಬಿ ಇನ್​ವೆಸ್ಟ್​ಮೆಂಟ್ ಅಥಾರಿಟಿ ಸಂಸ್ಥೆ ಈವರೆಗೆ ಜಿಯೋದಲ್ಲಿ ಹೂಡಿಕೆ ಮಾಡಿವೆ. ಈ 7 ಸಂಸ್ಥೆಗಳ 8 ಹೂಡಿಕೆ ಒಪ್ಪಂದಗಳಿಂದ ರಿಲಾಯನ್ಸ್ ಜಿಯೋಗೆ ಒಟ್ಟು 97,885.65 ಕೋಟಿ ರೂ ಬಂಡವಾಳ ಹರಿದುಬರಲಿದೆ. ಜಿಯೋ ಈವರೆಗೆ ತನ್ನ ಶೇ. 21.06ರಷ್ಟು ಪಾಲನ್ನು ಮಾರಿದಂತಾಗಿದೆ.

ಈವರೆಗೆ ಜಿಯೋದಲ್ಲಿ ಹೂಡಿಕೆ ಮಾಡಲಾಗಿರುವುದು:
ಫೇಸ್​ಬುಕ್: 43,573 ಕೋಟಿ ರೂ
ಸಿಲ್ವರ್ ಲೇಕ್ ಪಾರ್ಟ್ನರ್: 5,655.75
ವಿಸ್ಟಾ ಈಕ್ವಿಟಿ ಪಾರ್ಟ್ನರ್: 11,367ಜನರಲ್ ಅಟ್ಲಾಂಟಿಕ್: 6,598.38
ಕೆಕೆಆರ್: 11,367
ಮುಬಾದಲ: 9,093.60
ಸಿಲ್ವರ್ ಲೇಕ್ ಪಾರ್ಟ್ನರ್: 4,546.80
ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ: 5,683.50

ಒಟ್ಟು ಹೂಡಿಕೆ: 97,885.65 ಕೋಟಿ ರೂ.

ಈಗ ಹೂಡಿಕೆ ಮಾಡಿರುವ ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ ಕಂಪನಿಯು 1976ರಿಂದಲೂ ಅಬು ಧಾಬಿ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಜಾಗತಿಕವಾಗಿ ಹೂಡಿಕೆ ಮಾಡುತ್ತಾ ಬಂದಿದೆ. ವಿಶ್ವದೆಲ್ಲೆಡೆ ಹತ್ತಾರು ಕಂಪನಿಗಳಲ್ಲಿ ಅದು ಹೂಡಿಕೆ ಮಾಡಿ ನಿರ್ವಹಣೆ ನಡೆಸುತ್ತಿದೆ.

Comments are closed.