ರಾಷ್ಟ್ರೀಯ

ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ದಂಡ ಕಟ್ಟಿದ ಪೊಲೀಸ್ ಮಹಾನಿರ್ದೇಶಕ!

Pinterest LinkedIn Tumblr


ಕಾನ್ಪುರ: ಸಾರ್ವಜನಿಕವಾಗಿ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಕಾನ್ಫುರ ವಲಯದ ಪೊಲೀಸ್ ಮಹಾನಿರ್ದೇಶಕ ಮೊಹಿತ್ ಅಗರ್ ವಾಲ್ ತಾವೇ ದಂಡ ಪಾವತಿಸಿದ್ದಾರೆ.

ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ದಂಡ ವಿಧಿಸುವಂತೆ ಬಾರ್ರಾ ಪೊಲೀಸ್ ಠಾಣೆಯ ಅಧಿಕಾರಿ ರಂಜೀತ್ ಸಿಂಗ್ ಅವರನ್ನು ಮೊಹಿತ್ ಅಗರ್ ವಾಲ್ ಕೇಳಿಕೊಂಡಿದ್ದಾರೆ. ಈ ಸಂಬಂಧ ಚಲನ್ ಸಿದ್ದಪಡಿಸಿದ ಠಾಣಾ ಮುಖ್ಯಾಧಿಕಾರಿ ಪ್ರತಿಯನ್ನು ಐಜಿಯವರಿಗೆ ನೀಡಿದ್ದು, ಸ್ಥಳದಲ್ಲಿಯೇ 100 ರೂ. ದಂಡವನ್ನು ಕಟ್ಟಿದ್ದಾರೆ.

ಶುಕ್ರವಾರ ಪರಿಶೀಲನೆಗಾಗಿ ಬಾರ್ರಾಕ್ಕೆ ತೆರಳಿದ ನಾನು ಮಾಸ್ಕ್ ಧರಿಸದೆ ವಾಹನದಿಂದ ಕೆಳಗೆ ಇಳಿದಿದ್ದೆ.ಅಲ್ಲದೇ, ವೃತ್ತ ಅಧಿಕಾರಿಗಳು ಸೇರಿದಂತೆ ಅಧೀನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೆ. ನಂತರ ತಾನೂ ಮಾಸ್ಕ್ ಧರಿಸದೆ ಇರುವುದು ಗಮನಕ್ಕೆ ಬಂದಿತ್ತು. ಕೂಡಲೇ ಅಧಿಕೃತ ವಾಹನದಿಂದ ಮಾಸ್ಕ್ ತಂದು ಮುಖಕ್ಕೆ ಹಾಕಿಕೊಂಡಿದ್ದಾಗಿ ಅಗರ್ ವಾಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉದಾಹರಣ ನೀಡಲು ದಂಡ ಕಟ್ಟಿದ್ದೇನೆ. ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ಇರುವವರು 100 ರೂ. ದಂಡ ಕಟ್ಟುವಂತೆ ಸರ್ಕಾರದ ಆದೇಶವಿದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಯುವಲ್ಲಿ ಇದೊಂದು ಪ್ರಮುಖ ಮುಂಜಾಗ್ರತಾ ಕ್ರಮವಾಗಿದೆ ಎಂದು ಐಜಿ ಹೇಳಿದ್ದಾರೆ.

Comments are closed.