ಮುಂಬೈ: ಮುಂಬೈನ ಧಾರಾವಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಗುರುವಾರ ಮತ್ತೆ ಇಬ್ಬರು ಬಲಿಯಾಗಿದ್ದು, ಏಷ್ಯಾದ ಅತಿ ದೊಡ್ಡ ಸ್ಲಂನಲ್ಲಿ ಒಂದೇ ದಿನ 26 ಮಂದಿಗೆ ಕೊವಿಡ್-19 ದೃಢಪಟ್ಟಿದೆ. ಇದರೊಂದಿಗೆ ಸಾವಿನ ಸಂಖ್ಯೆ 9ಕ್ಕೆ ಹಾಗೂ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.
ಇಂದು ಧಾರಾವಿಯಲ್ಲಿ ಹೊಸದಾಗಿ 26 ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ದೇಶದಲ್ಲೆ ಅತಿ ಹೆಚ್ಚು 3081 ಕೊರೋನ ಸೋಂಕು ಪ್ರಕರಣ ವರದಿಯಾಗಿದ್ದು, ಈವರೆಗೆ 187 ಜನರು ಮೃತಪಟ್ಟಿದ್ದಾರೆ.
ಇಂದು ಒಂದೇ ದಿನದಲ್ಲಿ ಮಹಾರಾಷ್ಟ್ರದಲ್ಲಿ 165 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3081ಕ್ಕೆರಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬೈ ಈಗ ಕೊರೋನಾ ರಾಜಧಾನಿಯಾಗಿದ್ದು, ಮುಂಬೈ ಮಹಾನಗರಿಯೊಂದರಲ್ಲೇ ಇಂದು 107 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಪುಣೆಯಲ್ಲಿ 19, ಥಾಣೆಯಲ್ಲಿ 13 ಮತ್ತು ನಾಗಪುರದಲ್ಲಿ 11 ಪ್ರಕರಣಗಳು ವರದಿಯಾಗಿವೆ.
Comments are closed.