ರಾಷ್ಟ್ರೀಯ

ದೇಶದ 325 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೋನಾ ವೈರಸ್ ಪ್ರಕರಣವೂ ಪತ್ತೆಯಾಗಿಲ್ಲ

Pinterest LinkedIn Tumblr


ನವದೆಹಲಿ: ಕೊರೋನಾ ವೈರಸ್ ಹೊಡೆತಕ್ಕೆ ಮಹಾನಗರಗಳೇ ಪತರಗುಟ್ಟಿ ಹೋಗಿವೆ. ಈ ಆತಂಕದ ಪರಿಸ್ಥಿತಿಯಲ್ಲೇ ದೇಶದ 325 ಜಿಲ್ಲೆಗಳಲ್ಲಿ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂಬುದು ಖುಷಿಯಾ ವಿಚಾರವಾಗಿದೆ.

ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯದ ಆದೇಶಗಳು:

* ಲಾಕ್ ಡೌನ್ ನಿಯಮಗಳ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಗೃಹ ಸಚಿವಾಲಯ ಕ್ರಮ ಕೈಗೊಳ್ಳುತ್ತದೆ.

* ಐದು ಅಥವಾ ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಒಟ್ಟುಗೂಡಬಾರದು; ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಉಗುಳುವುದಕ್ಕೆ ನಿರ್ಬಂಧ.

* ವಯಸ್ಸಾದ, ಅನಾರೋಗ್ಯ ಮತ್ತು ಚಿಕ್ಕ ಮಕ್ಕಳಿರುವವರನ್ನು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.

* ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲವು ನಿಯಮಗಳನ್ನು ಜಾರಿಗೊಳಿಸಬೇಕು.

* COVID-19 ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲು ಮದ್ಯ, ಗುಟ್ಖಾ, ತಂಬಾಕು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

* ಕೆಲಸದ ಸ್ಥಳಗಳಲ್ಲಿ ತಾಪಮಾನ ತಪಾಸಣೆ ಮತ್ತು ಸ್ಯಾನಿಟೈಸರ್ಗಳ ಬಳಕೆ ಕಡ್ಡಾಯ.

* ವಲಸೆ ಕಾರ್ಮಿಕರು ಮತ್ತು ಅತಂತ್ರ ಸ್ಥಿತಿಯಲ್ಲಿರುವರ ಸುರಕ್ಷತೆ, ಆಶ್ರಯ ಮತ್ತು ಆಹಾರ ಸುರಕ್ಷತೆಗೆ ಸಾಕಷ್ಟು ವ್ಯವಸ್ಥೆಗಳನ್ನು ಖಾತ್ರಿಪಡಿಸಿಕೊಳ್ಳಲು ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಪ್ರಶ್ನಿಸಿದರು.

* ವಲಸೆ ಕಾರ್ಮಿಕರಿಗೆ ವ್ಯವಸ್ಥೆಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.

* ಜನ ಗುಂಪು ಸೇರುವುದು ಮತ್ತು ಅಂಗಡಿಗಳು ಮತ್ತು ಸಂಸ್ಥೆಗಳನ್ನು ತೆರೆಯುವುದು ಸೇರಿದಂತೆ ಲಾಕ್‌ಡೌನ್ ಮಾರ್ಗಸೂಚಿಗಳ ಉಲ್ಲಂಘನೆಯ ಘಟನೆಗಳ ಬಗ್ಗೆ MHA ಪ್ರತಿದಿನವೂ ಮೇಲ್ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಆರೋಗ್ಯ ಕಾರ್ಯಕರ್ತರ ವಿರುದ್ಧದ ಹಿಂಸಾಚಾರದ ಪ್ರಕರಣಗಳ ಬಗ್ಗೆಯೂ ಗಮನ ಅರಿಸಿದೆ.

* ಭಾರತದಲ್ಲಿ ಇಲ್ಲಿವರೆಗೂ 2,90,401 ಜನರನ್ನು ಪರೀಕ್ಷಿಸಲಾಗಿದ್ದು, ನಿನ್ನೆ ನಡೆದ 30,043 ಪ್ರಕರಣಗಳ ಪೈಕಿ ಐಸಿಎಂಆರ್‌ನ 176 ಲ್ಯಾಬ್‌ಗಳಲ್ಲಿ 26,331 ಪರೀಕ್ಷೆಗಳು ಮತ್ತು 78 ಖಾಸಗಿ ಲ್ಯಾಬ್‌ಗಳಲ್ಲಿ 3,712 ಪರೀಕ್ಷೆಗಳು ನಡೆದಿವೆ. ದೇಶದಲ್ಲಿ 325 ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

* ಚೀನಾದ ಎರಡು ಸಂಸ್ಥೆಗಳಿಂದ ಕ್ಷಿಪ್ರ ಕಾರ್ಯನಿರ್ವಹಿಸುವ ಪರೀಕ್ಷಾ ಕಿಟ್‌ಗಳನ್ನು ಒಳಗೊಂಡಂತೆ 5 ಲಕ್ಷ ಪರೀಕ್ಷಾ ಕಿಟ್‌ಗಳ ಆಮದು.

Comments are closed.