ರಾಷ್ಟ್ರೀಯ

ATM ಕಾರ್ಡ್ ಬಳಕೆದಾರರಿಗೆ ದೊಡ್ಡ ಉದುಗೊರೆ

Pinterest LinkedIn Tumblr


ನವದೆಹಲಿ:ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ATM ಕಾರ್ಡ್ ಧಾರಕರಿಗೆ ದೊಡ್ಡ ಉದುಗೊರೆಯಿಂದನ್ನು ನೀಡಿದೆ. ಹೌದು, ಬ್ಯಾಂಕ್ ಜೂನ್ 30ರವರೆಗೆ ಬ್ಯಾಂಕ್, ತನ್ನ ಐದು ಉಚಿತ ವ್ಯವಹಾರಗಳ ಮಿತಿಯನ್ನು ಹೆಚ್ಚಿಸಿದೆ. ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತ ನೇದಿರುಅ ಬ್ಯಾಂಕ್, ಮಾರ್ಚ್ 24 ರಂದು ವಿತ್ತ ಸಚಿವರು ಮಾಡಿದ ಪ್ರಕಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮ ಕೈಗೊಂಡಿದೆ ಎಂದು ಬ್ಯಾಂಕ್ ಹೇಳಿದೆ.

ತನ್ನ ಟ್ವೀಟ್ ನಲ್ಲಿ ಈ ಕುರಿತು ಹೇಳಿರುವ ಬ್ಯಾಂಕ್ “ATM ಕಾರ್ಡ್ ಬಳಕೆದಾರರಿಗೊಂದು ಸಂತಸದ ಸುದ್ದಿ! SBI ಉಚಿತ ವ್ಯವಹಾರಗಳ ಸಂಖ್ಯೆ 5 ಮೀರಿದ ಬಳಿಕವೂ ಕೂಡ ತನ್ನ ಗ್ರಾಹಕರಿಂದ ಯಾವುದೇ ಶುಲ್ಕ ಪಡೆಯದಿರಲು ನಿರ್ಧರಿಸಿದೆ ” ಎಂದು ಹೇಳಿದೆ.

ಉಚಿತ ಟ್ರಾನ್ಸಾಕ್ಶನ್ ಅಂದರೆ ಏನು?
ಒಂದು ವೇಳೆ ನೀವೂ ಕೂಡ ಯಾವುದೇ ಒಂದು ಬ್ಯಾಂಕ್ ನ ATMಗೆ ಭೇಟಿ ನೀಡಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಅಥವಾ ಮಿನಿ ಸ್ಟೇಟ್ಮೆಂಟ್ ನಂತಹ ಯಾವುದೇ ಕಾರ್ಯ ಮಾಡಿದರೆ ಅದಕ್ಕೆ ಉಚಿತ ಟ್ರಾನ್ಸಾಕ್ಶನ್ ಎಂದು ಕರೆಯಲಾಗುತ್ತದೆ. ಅಂದರೆ , ಒಂದುವೇಳೆ ನೀವು ಏಟಿಎಂ ಇಂದ ಹಣ ಪಡೆಯುತ್ತಿಲ್ಲ ಎಂದರೆ ಅದು ಉಚಿತ ಟ್ರಾನ್ಸಾಕ್ಷನ್ ಎಂದು ಪರಿಗಣಿಸಲಾಗುತ್ತದೆ.

ದೇಶಾದ್ಯಂತ ಇರುವ ಬ್ಯಾಂಕ್ ಗಳು ಪ್ರತಿ ತಿಂಗಳು ಕೆಲವೇ ಕೆಲ ಸಂಖ್ಯೆ ವ್ಯವಹಾರಗಳನ್ನು ಉಚಿತವಾಗಿ ನೀಡುತ್ತವೆ. ಈ ಉಚಿತ ವ್ಯವಹಾರಗಳ ಸಂಖ್ಯೆ ಮುಕ್ತಾಯವಾಗುತ್ತಿದ್ದಂತೆ ಬ್ಯಾಂಕ್ ನಿಮ್ಮ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸುತ್ತವೆ.

ಭಾರತದಲ್ಲಿ ಬಹುತೇಕ ಬ್ಯಾಂಕ್ ಗಳು 5 ರಿಂದ 8 ಉಚಿತ ATM ಟ್ರಾನ್ಸಾಕ್ಶನ್ ನೀಡುತ್ತವೆ. ಅದಾದ ಬಳಿಕ ಬ್ಯಾಂಕ್ ಗಳು ಶುಲ್ಕ ಪಡೆದುಕೊಳ್ಳುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸೇವಿಂಗ್ ಅಕೌಂಟ್ ಧಾರಕರಿಗೆ 8 ಉಚಿತ ತ್ರಾನ್ಸಾಕ್ಷನ್ ನೀಡುತ್ತದೆ. ಇವುಗಳಲ್ಲಿ ನೀವು ಮೂರು ವ್ಯವಹಾರಗಳನ್ನು ಬೇರೆ ಬ್ಯಾಂಕ್ ಗಳ ATM ಮೂಲಕ ಮಾಡಬಹುದು. ಆದರೆ. ಇತರೆ ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ SBI ಒಟ್ಟು 10 ಟ್ರಾನ್ಸಾಕ್ಶನ್ ಉಚಿತ ನೀಡುತ್ತದೆ

Comments are closed.