ಮುಂಬೈ

ತವರು ಮನೆಗೆ ಹೋಗುತ್ತೇನೆಂದು ಗಂಡನಿಗೆ ಹೇಳಿ ಹೋಗಿ ಪ್ರಿಯತಮನ ಜೊತೆ ಸಿಕ್ಕಿಬಿದ್ಳು!

Pinterest LinkedIn Tumblr


ಮುಂಬೈ: ಜೋಡಿಯೊಂದಕ್ಕೆ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿ ಹಾಗೂ ಆತನ ಗೆಳೆಯರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ತನ್ನ ಪತ್ನಿ ಆಕೆಯ ಲವ್ವರ್ ಜೊತೆಗಿರುವುದನ್ನು ಕಂಡ ಪತಿ ಹಾಗೂ ಆತನ ಗೆಳೆಯರು ಇಬ್ಬರಿಗೂ ಥಳಿಸಿದ್ದಾರೆ. ಹೀಗಾಗಿ ಥಳಿತಕ್ಕೊಳಗಾದವರು ನೀಡಿದ ದೂರಿನಂತೆ ಇಬ್ಬರನ್ನು ಬಂಧಿಸಿ ನಂತರ ರಿಲೀಸ್ ಮಾಡಲಾಗಿದೆ ಎಂದು ಇಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯೇನು..?
ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಪತ್ನಿ ಒಂದು ದಿನ ತನ್ನ ಹೆತ್ತವರನ್ನು ನೋಡಬೇಕೆಂದು ಹೇಳಿ ಬೊರಿವಾಲಿ ಈಸ್ಟ್ ನಲ್ಲಿರುವ ಪತಿ ಮನೆಯಿಂದ ಹೊರಬಂದಿದ್ದಾಳೆ. ಈ ಮೂಲಕ 26 ವರ್ಷದಾಕೆ ತನ್ನ ಪತಿಗೆ ಸುಳ್ಳು ಹೇಳಿ ಪ್ರಿಯಕರನ ಮನೆಗೆ ತೆರಳಿದ್ದಾಳೆ.

ಹೀಗೆ ಮನೆಯಿಂದ ಹೊರ ನಡೆದ ನಂತರ ಆಕೆ ತನ್ನ ಗಂಡನ ಫೋನ್ ಕಾಲ್ ಗಳನ್ನು ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಪತಿ ತನ್ನ ಸಂಬಂಧಿಕರಲ್ಲಿ ಪತ್ನಿಯ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ಅವರು ತಮ್ಮ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಆತ ಪೊಲೀಸರ ಬಳಿ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಕೇಳಿಕೊಂಡಿದ್ದಾನೆ. ಅಲ್ಲದೆ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ಕೂಡ ದಾಖಲು ಮಾಡುತ್ತಾನೆ.

ಪತಿ ನೀಡಿದ ದೂರು ಸ್ವೀಕರಿಸಿದ ಪೊಲೀಸರು ಮಹಿಳೆಯ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೆ ಆಕೆಯ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಈ ವೇಳೆ ಮಹಿಳೆ ಥಾಕೂರ್ ಗ್ರಾಮದಲ್ಲಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಆರಂಭಿಸಿದಾಗ ಮಹಿಳೆ ಮತ್ತೊಬ್ಬ ವ್ಯಕ್ತಿ ಜೊತೆ ಇರುವುದು ಗೊತ್ತಾಗಿದೆ. ಈ ವಿಚಾರ ತಿಳಿದ ಕೂಡಲೇ ಸಿಟ್ಟಿಗೆದ್ದ ಪತಿರಾಯ, ತನ್ನ ಗೆಳೆಯರಿಗೆ ಕಾಲ್ ಮಾಡಿ ಅವರನ್ನು ಕರೆದುಕೊಂಡು ನೇರವಾಗಿ ಥಾಕೂರ್ ಗ್ರಾಮಕ್ಕೆ ತೆರಳಿದ್ದಾನೆ.

ಹೀಗೆ ಹೋದವರು ಪತ್ನಿ ಹಾಗೂ ಆಕೆಯ ಲವ್ವರ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಪರಿಣಾಮ ಮಹಿಳೆಯ ಪ್ರಿಯಕರನ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲ್ಲೆಗೈದ ಆರೋಪಿ ವಿರುದ್ಧವೂ ಪೊಲೀಸರು ದಾಖಲಿಸಿದ್ದಾರೆ.

ಮಹಿಳೆಯನ್ನು ತನಿಖೆ ನಡೆಸಿದಾಗ, ನನಗೆ ನನ್ನ ಗಂಡನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ. ಬದಲಾಗಿ ತನ್ನ ನನ್ನ ಲವ್ವರ್ ಜೊತೆ ಜೀವನ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾಳೆ.

Comments are closed.