ಮನುಷ್ಯನ ಜೀವನ ಅನ್ನುವುದು ನೀರಿನ ಮೇಲಿನ ಗುಳ್ಳೆಯ ಹಾಗೆ ಎಂದು ಹೇಳಿದರೆ ತಪ್ಪಲ್ಲ, ಯಾವಾಗ ಯಾರಿಗೆ ಸಾವು ಬರುತ್ತದೋ ಮತ್ತು ಯಾವಾಗ ಯಾರಿಗೆ ಖಾಯಿಲೆಗಳು ಬರುತ್ತದೆ ಎಂದು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನು ಈಗಿನ ಕಾಲದಲ್ಲಿ ಹೃದಯಾಘಾತ ಅನ್ನುವುದು ಮಾಮೂಲಿಯಾಗಿದೆ ಎಂದು ಹೇಳಿದರೆ ತಪ್ಪಲ್ಲ, ಹಿಂದೆ ನೂರಕ್ಕೆ ಒಬ್ಬರಲ್ಲಿ ಈ ಹೃದಯಾಘಾತದ ತೊಂದರೆ ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ ಚಿಕ್ಕ ಮಕ್ಕಳಿಗೂ ಹೃದಯಾಘಾತ ಆಗುತ್ತಿದೆ ಅನುವುದು ನೋವಿಯ ಸಂಗತಿಯಾಗಿದೆ. ಇನ್ನು ಈಗ ತನ್ನ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಭಾರತದ ಖ್ಯಾತ ನಟಿ, ತುಂಬಾ ಆರೋಗ್ಯವಾಗಿದ್ದ ಈ ನಟಿಗೆ ಏಕಾಏಕಿ ಹೃದಯಾಘಾತ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಶಾಕ್ ಮೂಡಿಸಿದೆ.
ಗೇಯನಾ ವಶಿಷ್ಠ, ಈಕೆ ಬಾಲಿವುಡ್ ಚಿತ್ರಗಳಲ್ಲಿ ಮತ್ತು ಹಿಂದೂ ಕಿರುತೆರೆಗಳಲ್ಲಿ ಉತ್ತಮವಾಗಿ ನಟನೆಯನ್ನ ಮಾಡುವುದರ ಮೂಲಕ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿದ್ದಾರೆ, ಇನ್ನು ಗೇಯನಾ ವಶಿಷ್ಠ ಅವರು ಕೇವಲ ನಟನೆಯನ್ನ ಮಾಡದೆ ನಿರೂಪಕಿಯಾಗಿ ಕೂಡ ಕೆಲಸವನ್ನ ಮಾಡಿದ್ದಾರೆ. ಇನ್ನು ಖ್ಯಾತ ನಟಿ ಸುಮಾರು 70 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇನ್ನು ನಿನ್ನೆ ಗೇಯನಾ ಅವರು ಒಂದು ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಇನ್ನು ಗೇಯನಾ ಅವರು ಸತತವಾಗಿ ಒಂದು ವಾರಗಳಿಂದ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇನ್ನು ತುಂಬಾ ಚನ್ನಾಗಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಗೇಯನಾ ಇದ್ದಕ್ಕಿದ್ದ ಹಾಗೆ ಹೃದಯ ಹಿಡಿದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ, ಇನ್ನು ತಕ್ಷಣ ಗೇಯನಾ ಅವರನ್ನ ಮುಂಬೈನ ರಕ್ಷಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇನ್ನು ಆಸ್ಪತ್ರೆಯಲ್ಲಿ ಗೇಯನಾ ಅವರನ್ನ ಪರೀಕ್ಷೆ ಮಾಡಿದ ವೈದ್ಯರು ಗೇಯನಾ ಅವರಿಗೆ ಹೃದಯಾಘಾತ ಆಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಅತಿಯಾದ ಔಷಧಿಗಳ ಸೇವನೆ ಮತ್ತು ಶಕ್ತಿ ಪಾನೀಯಗಳನ್ನ ಸೇವನೆ ಮಾಡಿದ್ದರಿಂದ ಅವರಿಗೆ ಹೃದಯಾಘಾತ ಆಗಿದೆ ಎಂದು ವೈದ್ಯರು ಹೇಳಿದ್ದಾರೆ, ಇನ್ನು ಗೇಯನಾ ಸದ್ಯಕ್ಕೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಮತ್ತು ಅವರಿಗೆ ಉಸಿರಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಇನ್ನು ಆಕೆಯ ಮೆದುಳಿಗೆ ಸರಿಯಾದ ಒಕ್ಸಿಜೆನ್ ಸರಬರಾಜು ಆಗುತ್ತಿದೆಯೇ ಎಂದು ತಿಳಿದುಕೊಳ್ಳಲು ನಟಿ ಗೇಯನಾ ಅವರನ್ನ ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಇನ್ನು ಮುಂದಿನ 48 ಘಂಟೆಗಳ ತನಕ ಏನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದು ದೇವರು ಕಣ್ಣು ತೆರೆಯಬೇಕಾಗಿದೆ, ಇನ್ನು ನಟಿ ಗೇಯನಾ ವಶಿಷ್ಠ ಸ್ಥಿತಿ ತುಂಬಾ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.