ಕರಾವಳಿ

ಬಂದೂಕು ಪರವಾನಗಿ : ಅವಧಿ ಮುಕ್ತಾಯಗೊಳ್ಳುವ ಮೊದಲೇ ಅರ್ಜಿ ಸಲ್ಲಿಸಲು‌ ಎಡಿಸಿ ಸೂಚನೆ

Pinterest LinkedIn Tumblr

ಉಡುಪಿ: ಬಂದೂಕು ಪರವಾನಿಗೆದಾರರು ತಮ್ಮ ಬಂದೂಕು ಪರವಾನಿಗೆಯನ್ನು ನವೀಕರಿಸಲು ವಿಳಂಬವಾಗಿ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬರುತ್ತಿದ್ದು, ಶಸ್ತ್ರಾಸ್ತ್ರ ಕಾಯಿದೆ ನಿಯಮಗಳು 2016 ನಿಯಮ 24 ರಂತೆ ಪರವಾನಿಗೆ ಅವಧಿ ಮುಕ್ತಾಯವಾಗುವ 60 ದಿನಗಳ ಮುಂಚಿತವಾಗಿ ಪರವಾನಿಗೆಯನ್ನು ನವೀಕರಿಸುವರೇ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

(ಸಾಂದರ್ಭಿಕ ಚಿತ್ರ)

ಆದ್ದರಿಂದ ಬಂದೂಕು ಪರವಾನಿಗೆಯನ್ನು ಹೊಂದಿರುವ ಪರವಾನಿಗೆದಾರರು ತಮ್ಮ ಬಂದೂಕು ಪರವಾನಿಗೆಯನ್ನು ನವೀಕರಿಸುವ ಸಮಯದಲ್ಲಿ ಪರವಾನಿಗೆಯ ಅವಧಿ ಮುಕ್ತಾಯಗೊಳ್ಳುವ 60 ದಿನ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.