ಮುಂಬೈ

ಮೈತ್ರಿ ಮಹಾ ವಿಕಾಸ್‌ನ ಅಧಿಕಾರ ಹಂಚಿಕೆಯಲ್ಲಿ ಯಾರಿಗೆ ಯಾವ ಸ್ಥಾನ ?

Pinterest LinkedIn Tumblr

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಮಹಾ ವಿಕಾಸ್‌ನ ಅಧಿಕಾರ ಹಂಚಿಕೆ ಕೊನೆಯಾಗಿದೆ ಎನ್ನಲಾಗಿದ್ದು, ಕೇವಲ ಒಂದೇ ಒಂದು ಡಿಸಿಎಂ ಹುದ್ದೆಯನ್ನು ಮೀಸಲಿಡಲಾಗಿದ್ದು, ಈ ಪೈಕಿ ಅದು ಎನ್‌ಸಿಪಿ ಪಾಲಾಗಿದ್ದು, ಕಾಂಗ್ರೆಸ್‌ ಕೇವಲ ಸ್ಪೀಕರ್‌ ಸ್ಥಾನಕ್ಕೆ ತೃಪ್ತಿಪಟ್ಟಿಕೊಟ್ಟಿದೆ ಎನ್ನಲಾಗಿದೆ.

ಇದಲ್ಲದೇ ಎನ್‌ಸಿಪಿಗೆ ಅತೀ ಹೆಚ್ಚಿನ 16 ಸಚಿವ ಸಚಿವ ಸ್ಥಾನಗಳು ಸಿಗಲಿವೆ. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ 15 ಸ್ಥಾನಗಳು ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ನಾವು ಉಪ ಸಿಎಂ ಮತ್ತು ಸ್ಪೀಕರ್ ಹುದ್ದೆಗಳಿಗೆ ಒತ್ತಾಯಿಸುತ್ತಿದ್ದೆವು, ಆದರೆ ಈಗ ಸ್ಪೀಕರ್ ಹುದ್ದೆಗೆ ಮಾತ್ರ ತೃಪ್ತಿಪಡಬೇಕಾಗಿದೆ ಅಂತ ರಾಜಕಾರಣಿಯೊಬ್ಬರು ಹೇಳಿದ್ದಾರೆ.

ಹದಿನೈದು ದಿನಗಳ ಹಿಂದೆ ನವದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗಿನ ಮೊದಲ ಸಭೆಯಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಕಾಂಗ್ರೆಸ್ಗೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಹುದ್ದೆ ಮತ್ತು ಉಪ ಮಂತ್ರಿ ಸೇರಿದಂತೆ 12 ಮಂತ್ರಿ ಸ್ಥಾನಗಳನ್ನು ಪಡೆಯುವುದಾಗಿ ಒಪ್ಪಿಕೊಂಡಿತು

.’ಸಂಪುಟದಲ್ಲಿ ಕೇವಲ ಒಂದೇ ಡಿಸಿಎಂ ಹುದ್ದೆ ಇರಲಿದೆ. ಅದು ಎನ್​ಸಿಪಿ ಪಕ್ಷದ ನಾಯಕರಿಗೆ ಸೀಮಿತವಾಗಿರಲಿದೆ. ವಿಧಾನಸಭೆಯ ಸ್ಪೀಕರ್ ಹುದ್ದೆ ಕಾಂಗ್ರೆಸ್​ ಪಾಲಾಗಲಿದೆ. ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸುವಾಗ ಮೂರು ಪಕ್ಷದಿಂದ ತಲಾ ಇಬ್ಬರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ ಅಂತ ಮಹಾರಾಷ್ಟ್ರ ವಿಕಾಸ್ ಅಘಾದಿ ಒಕ್ಕೂಟ(Maharashtra Vikas Aghadi coalition)ದ ಮೀಟಿಂಗ್ ನಂತರ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಈ ಸಭೆಯಲ್ಲಿ ಉದ್ಧವ್ ಠಾಕ್ರೆ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಕೂಡ ಭಾಗಿಯಾಗಿದ್ದರು. ಮೂರು ಪಕ್ಷಗಳ ಮೀಟಿಂಗ್​ನಲ್ಲಿ ಯಾರಿಗೆ ಯಾವ ಸ್ಥಾನ ಅನ್ನೋ ಬಗ್ಗೆ ಚರ್ಚೆ ನಡೆಸಲಾಗಿದೆ. ಶಿವಸೇನೆಗೆ 15 ಸಚಿವ ಸ್ಥಾನ, ಎನ್​ಸಿಪಿಗೆ ಡಿಸಿಎಂ ಹಾಗೂ 13 ಸಚಿವ ಸ್ಥಾನ ಹಾಗೂ ಕಾಂಗ್ರೆಸ್​ಗೆ ಸ್ಪೀಕರ್ ಹಾಗೂ 13 ಸಚಿವ ಸ್ಥಾನಗಳು ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಅಂತ ಹೇಳಲಾಗ್ತಿದೆ.

Comments are closed.