ಮಂಗಳಮುಖಿಯರು ಕೂಡ ನಮ್ಮ ಸಮಾಜದ ಒಂದು ಭಾಗವಾಗಿದ್ದಾರೆ, ಆದರೆ ಎಷ್ಟೋ ಮಂದಿ ಇಂದು ಅವರಿಗೆ ಸಲ್ಲಬೇಕಾದ ಸ್ಥಾನಮಾನ ನೀಡಲು ಒಪ್ಪಿಕೊಳ್ಳುವುದಿಲ್ಲ ಮತ್ತು ಅವರನ್ನು ಕೀಳಾಗಿ ಅಥವಾ ಕೆಟ್ಟ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿರಲಿ ಹಿಂದೊಂದು ದಿನ ಅಂದರೆ ಪುರಾಣ ಕಾಲದಲ್ಲಿಯೂ ಕೂಡ ಮಂಗಳಮುಖಿಯರಿಗೆ ಉತ್ತಮ ಸ್ಥಾನ ನೀಡಲಾಗಿತ್ತು, ಶಾಸ್ತ್ರಗಳ ಪಕಾರ ಮಂಗಳಮುಖಿಯರಿಗೆ ದಾನ ಮಾಡುವುದರಿಂದ ಭಗವಾನ್ ವಿಷ್ಣುವಿನ ಕ್ರಪೆ ಸಿಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ವಿಷ್ಣುವಿನ ಆಶೀರ್ವಾದ ಮತ್ತು ಗ್ರಹಗಳ ಸಂಚಾರದಲ್ಲಿ ಸಿಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಇಷ್ಟೇ ಅಲ್ಲದೆ ಇವರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬಾರದು ಎಂದು ಕೂಡ ಹೇಳಲಾಗಿದೆ ಮತ್ತು ಈ ವಸ್ತುಗಳನ್ನು ಭಿಕ್ಷೆಯಾಗಿ ಕೊಟ್ಟರೆ ಖಂಡಿತ ನಿಮ್ಮನ್ನು ದರಿದ್ರತನ, ನಷ್ಟ, ದುರಾದ್ರಷ್ಟ ಬೆನ್ನಟ್ಟುತ್ತದೆ. ಇನ್ನು ವಸ್ತುಗಳನ್ನ ದಾನವಾಗಿ ಮಂಗಳಮುಖಿಯರಿಗೆ ನೀಡುವುದರಿಂದ ನೀವು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಹಾಗೆ ನಿಮ್ಮ ಜೀವನದಲ್ಲಿ ಏಳಿಗೆ ಆಗುವುದಿಲ್ಲ. ಹಾಗಿದ್ದರೆ ದಾರಿಯಲ್ಲಿ ಮಂಗಳಮುಖಿಯರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬಾರದು ಗೊತ್ತಾ ಒಮ್ಮೆ ತಿಳಿಯಿರಿ . ಹಬ್ಬದ ಸಮಯದಲ್ಲಿ ಮನೆಯ ಹಳೆಯ ವಸ್ತುಗಳನ್ನು ಹಾಗು ಬಳಸದ ವಸ್ತುಗಳನ್ನು ದಾನ ಮಾಡುವ ಅಭ್ಯಾಸ ಹಲವು ಜನರಿಗೆ ಇದೆ, ಸ್ನೇಹಿತರೆ ಇದು ಒಳ್ಳೆಯ ಅಭ್ಯಾಸ ಆದರೆ ನೆನೆಪಿಡಿ ಮಂಗಳಮುಖಿಯರಿಗೆ ಯಾವತ್ತೂ ಕೂಡ ಪಾತ್ರೆಗಳನ್ನು ದಾನವಾಗಿ ನೀಡಬೇಡಿ.
ಹೌದು ಮಂಗಳಮುಖಿಯರಿಗೆ ಪಾತ್ರೆಗಳನ್ನ ದಾನವಾಗಿ ನೀಡುವುದರಿಂದ ನಿಮ್ಮ ಕುಟುಂಬದಲ್ಲಿ ಅಶಾಂತಿ, ಜಗಳ, ಕಲಹಕ್ಕೆ ಕಾರಣವಾಗುತ್ತದೆ, ಕುಟುಂಬದ ಸದಸ್ಯರಲ್ಲಿ ಮನಸ್ತಾಪ ಮತ್ತು ಕುಟುಂಬದ ಅಭಿವೃದ್ಧಿಗೆ ದೋಷವಾಗುತ್ತದೆ. ಇಷ್ಟೇ ಅಲ್ಲದೆ ಇವರಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕೂಡ ನೀಡುವುದು ತಪ್ಪಾಗುತ್ತದೆ ಇದರಿಂದ ಮನೆಯ ಸದಸ್ಯರಿಗೆ ಯಾವುದಾದರು ರೋಗ ಅಥವಾ ಅರೋಗ್ಯ ಹದಗೆಡುವ ಸಮಸ್ಯೆಗಳು ಪದೇ ಪದೇ ಎದುರಾಗಬಹುದು, ಇದು ಕುಟುಂಬದ ಪ್ರಗತಿಗೆ ಅಡ್ಡಿಯಾಗುತ್ತದೆ. ಹಾಗೆಯೆ ಮನೆಯಲ್ಲಿನ ಪೊರಕೆಯನ್ನು ಲಕ್ಷ್ಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಮನೆಗೆ ಬರುವ ಮಂಗಳಮುಖಿಯರಿಗೆ ಇದನ್ನು ನೀಡಬೇಡಿ ಮತ್ತು ಇದನ್ನು ಮಾಡುವುದರಿಂದ ನೀವು ಲಕ್ಷ್ಮಿಯ ವಾಸಸ್ಥಾನವನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಮತ್ತು ತೊಂದರೆಯ ಜೀವನವನ್ನು ನಡೆಸಬೇಕಾಗುತ್ತದೆ ಹಾಗೆ ಹಣಕಾಸಿನ ವಿಚಾರದಲ್ಲಿ ಒಮ್ಮೊಮ್ಮೆ ನೀವೂ ಕೂಡ ಎಷ್ಟೇ ಹಣವಿದ್ದರೂ ಒಮ್ಮೊಮ್ಮೆ ಸಂದಿಗ್ದ ಪರಿಸ್ಥಿತಿಗೆ ತಲುಪುವಿರಿ.
ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಶನಿವಾರ ದಿನ ದಾನ ಮಾಡಲಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಮತ್ತು ಇದು ಮನೆಯ ಬಡತನ ಮತ್ತು ದುರದೃಷ್ಟವನ್ನು ತೆಗೆದುಹಾಕುತ್ತದೆ. ಆದರೆ ಮನೆಗೆ ಬರುವ ಮಂಗಳಮುಖಿಯರಿಗೆ ಎಂದಿಗೂ ತೈಲವನ್ನು ದಾನ ಮಾಡಬಾರದು ಎಂಬುದು ನಿಮಗೆಲ್ಲರಿಗೂ ತಿಳಿದಿಲ್ಲ, ಹೌದು ಸ್ನೇಹಿತರೆ ಹೀಗೆ ಮಾಡಿದರೆ ದುಃಖ ಮತ್ತು ಬಡತನವು ನಿಮ್ಮ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತದೆ, ಸ್ನೇಹಿತರೆ ಈ ಎಲ್ಲಾ ವಸ್ತುಗಳನ್ನ ನೀವು ಮಂಗಮುಖಿಯರಿಗೆ ದಾನ ಮಾಡುವುದರಿಂದ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಸ್ವಲ್ಪ ಜಾಗ್ರತೆ.

Comments are closed.