ಮುಂಬೈ

ಇನ್ಮುಂದೆ ಇನ್ ಸ್ಟಾ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂತೆಂದು ತಿಳಿಯಲ್ಲ

Pinterest LinkedIn Tumblr


ಮುಂಬೈ: ಇನ್ ಸ್ಟಾ ಗ್ರಾಂ ಹೊಸ ಫೀಚರ್ ಒಂದನ್ನು ಅತೀ ಶೀಘ್ರದಲ್ಲಿ ಜಾರಿಗೆ ತರಲಿದ್ದು, ಇನ್ಮುಂದೆ ನಿಮ್ಮ ಪೋಸ್ಟ್ ಗೆ ಎಷ್ಟು ಲೈಕ್ಸ್ ಆಗಿದೆಯೆಂದು ಯಾರಿಗೂ ತಿಳಿಯುವುದಿಲ್ಲ. ಅದೇ ರೀತಿ ಇತರರ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂದಿದೆಯೆಂದು ನಿಮಗೂ ತಿಳಿಯುವುದಿಲ್ಲ. ಇದರಿಂದ ಕಡಿಮೆ ಲೈಕ್ಸ್ ಬಂತೆಂದು ಒತ್ತಡಕ್ಕೊಳಗಾಗುವ ಪ್ರಮೇಯವೇ ಬರುವುದಿಲ್ಲ ಎಂದು ಇನ್ ಸ್ಟಾಗ್ರಾಂ ಸಂಸ್ಥೆ ತಿಳಿಸಿದೆ.

ಪ್ರಸಿದ್ದ ವ್ಯಕ್ತಿಗಳು, ಕಲಾವಿದರು ಸೇರಿದಂತೆ ದಿನನಿತ್ಯ ಇನ್ ಸ್ಟಾಗ್ರಾಂ ಬಳಸುವ ವ್ಯಕ್ತಿಗಳು ತಮಗೆ ಕಡಿಮೆ ಲೈಕ್ಸ್ ಬಂದಾಕ್ಷಣ ಹೊಸ ಪೋಸ್ಟ್ ಹಾಕಲು ಹಿಂದೇಟು ಹಾಕುತ್ತಾರೆ. ಇದರಿಂದ ಫಾಲೋವರ್ಸ್ ಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಆದಾಯ ಕೂಡ ಕುಂಠಿತವಾಗುತ್ತದೆ.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇನ್ ಸ್ಟಾಗ್ರಾಂ ತನ್ನ ಪ್ರೈವೇಟ್ ಲೈಕ್ಸ್ ಕೌಂಟ್ ಅನ್ನು ವಿಸ್ತರಿಸುವ ಬಗ್ಗೆ ಪ್ರಕಟಿಸಿದೆ. ಇದರಿಂದ ಇತರರ ಫೋಟೋ ಮತ್ತು ವಿಡಿಯೋಗಳಿಗೆ ಎಷ್ಟು ಲೈಕ್ಸ್ ಅಥವಾ ವ್ಯೂ ಅಗಿದೆ ಎಂದು ನಿಮಗೆ ನೋಡುವ ಅವಕಾಶವಿರುವದಿಲ್ಲ ಎಂದು ಇನ್ ಸ್ಟಾಗ್ರಾಂ ಉಪಾಧ್ಯಕ್ಷ ವಿಶಾಲ್ ಶಾ ತಿಳಿಸಿದ್ದಾರೆ. ಹೋಸ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಅತೀ ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದಿದ್ದಾರೆ.

Comments are closed.