ರಾಷ್ಟ್ರೀಯ

ಎಪ್ರಿಲ್ ನಿಂದ ರಾಮ ಮಂದಿರ ನಿರ್ಮಾಣ

Pinterest LinkedIn Tumblr


ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದಿತ ಭೂಭಾಗ ರಾಮಲಲ್ಲಾ ಪರವಾಗಿ ತೀರ್ಪು ಬಂದ ನಂತರ ಎಲ್ಲರ ಕಣ್ಣು ರಾಮ ಮಂದಿರ ನಿರ್ಮಾಣದ ಮೇಲೆ ಬಿದ್ದಿದೆ. ನಿರ್ಮಾಣ ಕಾರ್ಯ ಯಾವಾಗ ಆರಂಭವಾಗುತ್ತದೆ ಎಂಬ ಕುತೂಹಲ ಮನೆಮಾಡಿದೆ.

ಮೂಲಗಳ ಮಾಹಿತಿ ಪ್ರಕಾರ ಮುಂದಿನ ವರ್ಷದ ಎಪ್ರಿಲ್ ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಕೇಂದ್ರ ಸರಕಾರ ಒಂದು ಟ್ರಸ್ಟ್ ನಿರ್ಮಿಸಿ ಮಂದಿರ ನಿರ್ಮಾಣದ ಹೊಣೆ ಹೊರಿಸಲಿದೆ. ಸೋಮನಾಥ ಪುರ ದೇವಸ್ಥಾನ ನಿರ್ಮಾಣಕ್ಕೂ ಇದೇ ರೀತಿ ಟ್ರಸ್ಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಸೋಮನಾಥ ದೇವಳ ಟ್ರಸ್ಟ್ ನಲ್ಲಿ ಆರು ಮಂದಿ ಸದಸ್ಯರಿದ್ದರು. ರಾಮ ಮಂದಿರ ನಿರ್ಮಾಣ ಟ್ರಸ್ಟ್ ನಲ್ಲಿ 14ರಿಂದ 17 ಮಂದಿ ಸದಸ್ಯರಿರುತ್ತಾರೆ ಎನ್ನಲಾಗಿದೆ.

2022 ರ ವೇಳೆಗೆ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ

Comments are closed.