ರಾಷ್ಟ್ರೀಯ

16 ವರ್ಷದ ಬಾಲಕನಿಂದ ಮಂಚಕ್ಕೆ ಕಟ್ಟಿ ಹಾಕಿ ಸೋದರ ಸಂಬಂಧಿಯ ಅತ್ಯಾಚಾರ

Pinterest LinkedIn Tumblr


ಗುರುಗ್ರಾಮ: 16 ವರ್ಷದ ಬಾಲಕನೋರ್ವ ತನ್ನ ಸೋದರ ಸಂಬಂಧಿ ಬಾಲಕಿಯೋರ್ವಳನ್ನು ಮಂಚಕ್ಕೆ ಕಟ್ಟಿ ಹಾಕಿ ಅತ್ಯಾಚಾರಗೈದ ಘಟನೆ ಹರಿಯಾಣ ಗುರುಗ್ರಾಮದ 51 ನೇ ವಲಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷದ ಸಂತ್ರಸ್ತ ಬಾಲಕಿ ಶುಕ್ರವಾರ ತನ್ನ ಶಾಲಾ ಶಿಕ್ಷಕಿಗೆ ವಿಷಯ ತಿಳಿಸಿದ್ದಾಳೆ. ಆ ಬಳಿಕವಷ್ಟೇ ಪಾಲಕರು ಪೊಲೀಸರು ದೂರು ದಾಖಲಿಸಿದ್ದಾರೆ.

ಸಂತ್ರಸ್ತೆಯ ತಾಯಿಯು ತನ್ನ ಮಗಳನ್ನು ಮನೆಗೆಲಸಕ್ಕೆ ಸಹಾಯ ಮಾಡಲೆಂದು ನಾದಿನಿಯ ಮನೆಗೆ ಕಳುಹಿಸಿದ್ದರು. ಆದರೇ ನಾದಿನಿ ತನ್ನ ಮಗನನ್ನು ಮತ್ತು ಬಾಲಕಿಯನ್ನು ಅಲ್ಲಿಯೇ ಬಿಟ್ಟು ವೈದ್ಯರ ಭೇಟಿಗೆ ತೆರಳಿದ್ದರು. ಈ ವೇಳೆಗೆ ಬಾಲಕ ಆಕೆಯನ್ನು ಮಂಚಕ್ಕೆ ಬಿಗಿಯಾಗಿ ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ.

ಸದ್ಯ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.