ರಾಷ್ಟ್ರೀಯ

ಅತಿ ಹೆಚ್ಚು ರಸ್ತೆ ಅಪಘಾತ : ಕರ್ನಾಟಕ ರಾಜ್ಯಕ್ಕೆ ನಾಲ್ಕನೆ ಸ್ಥಾನ

Pinterest LinkedIn Tumblr

ನವದೆಹಲಿ : 2018ರಲ್ಲಿ ಅತಿಹೆಚ್ಚು ಅಪಘಾತಗಳು ನಡೆಯುವ ರಾಜ್ಯಗಳ ಪಟ್ಟಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ(ಎಂಓಆರ್ ಟಿ ಹೆಚ್) 2018ನೇ ಸಾಲಿನ ಅತಿಹೆಚ್ಚು ಅಪಘಾತಗಳು ನಡೆಯುವ ರಾಜ್ಯಗಳ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 2.2 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಈ ವರದಿಯಿಂದ ತಿಳಿದು ಬಂದಿದೆ.

ಈ ವರದಿಯ ಅನುಸಾರವಾಗಿ 2018ರಲ್ಲಿ ರಾಜ್ಯದಲ್ಲಿ 41,707 ಅಪಘಾತಗಳು ಸಂಭವಿಸಿವೆ. ಇದು 2017ನೇ ವರ್ಷಕ್ಕೆ ಹೊಲಿಕೆ ಮಾಡಿದ್ರೇ ಕಡಿಮೆಯೇ. ಅಂದಹಾಗೇ ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಕೇರಳದಲ್ಲಿ 2018ರ ಜನವರಿ, ಮೇ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಅದರಲ್ಲೂ ಕರ್ನಾಟಕದಲ್ಲಿ 2018ರಲ್ಲಿ ಸಂಭವಿಸಿದ 100 ಅಪಘಾತಗಳಲ್ಲಿ 26 ಜನರು ಕನಿಷ್ಠ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ತಿಳಿಸಿದೆ.

Comments are closed.