ರಾಷ್ಟ್ರೀಯ

ಬೆಳೆ ನಾಶ, ಜನರ ಮೇಲೆ ದಾಳಿ ನಡೆಸಿದ್ದ ಒಸಮಾ ಬಿನ್​ ಲಾಡೆನ್​ ಮೃತ್ಯು.

Pinterest LinkedIn Tumblr

ಅಸ್ಸಾಂ : ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯ ಸುತ್ತಮುತ್ತಲಿನ ಜನರನ್ನು ಇನ್ನಿಲ್ಲದಂತೆ ಕಾಡಿದ್ದ ಒಸಮಾ ಬಿನ್​ ಲಾಡೆನ್​ ಮೃತಪಟ್ಟಿದ್ದಾನೆ.

ಈ ಒಸಮಾ ಬಿನ್​ ಲಾಡೆನ್​ ಒಂದು ಕಾಡಾನೆ. ಅಲ್ಲಿನ ಜನರನ್ನು ರಾಕ್ಷಸ ರೀತಿಯಲ್ಲಿ ಕಾಡಿದ್ದ. ಬೆಳೆ ನಾಶ, ಜನರ ಮೇಲೆ ದಾಳಿ ನಡೆಸಿದ್ದ. ಈ ಉಪಟಳ ತಾಳಲಾರದ ಅಲ್ಲಿನ ಮಂದಿ ಕಾಡಾನೆಗೆ ಅಲ್​ ಕೈದಾ ಉಗ್ರಸಂಘಟನೆಯ ಮುಖ್ಯಸ್ಥ ಒಸಮಾ ಬಿನ್​ ಲಾಡೆನ್​ ಹೆಸರನ್ನು ಇಟ್ಟಿದ್ದರು.

ಬಳಿಕ ನ.11ರಂದು ರಂಗ್ಜುಲಿ ಅರಣ್ಯ ವಿಭಾಗದ ಸಿಬ್ಬಂದಿ ಮದಗಜವನ್ನು ಶಾಂತಗೊಳಿಸಿ ಸೆರೆ ಹಿಡಿದಿದ್ದರು. ಹಾಗೇ ನ.12ರಂದು ಆನೆಯನ್ನು ಆರಂಜ್​ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು. ಲಾಡೆನ್​ ಹೆಸರನ್ನು ಬದಲಿಸಿ, ಕೃಷ್ಣಾ ಎಂದು ನಾಮಕರಣ ಮಾಡಲಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಬಿಡಲು ಯೋಚಿಸಿದ್ದರು. ಆದರೆ ಸ್ಥಳೀಯ ಜನರು ಪ್ರತಿಭಟನೆ ಮಾಡಿದ್ದರಿಂದ ಸೆರೆಯಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಿದ್ದರು. ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿರಲಿಲ್ಲ. ಪೋಸ್ಟ್​ಮಾರ್ಟಂ ಬಳಿಕವಷ್ಟೇ ಆನೆ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಸೂಟಿಯಾ ವಿಧಾನಸಭಾ ಕ್ಷೇತ್ರದ ಶಾಸಕ ಪದ್ಮಾ ಹಝರಿಕಾ ನೇತೃತ್ವದ ಪಶುವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ತಂಡ ಕಾಡಾನೆಯನ್ನು ಪಳಗಿಸಿ, ಸೆರೆ ಹಿಡಿದಿತ್ತು

Comments are closed.