ಮುಂಬೈ

ದೀಪಾವಳಿ ಪೂರ್ವ ಕೊಡುಗೆಯಾಗಿ ಗೋ ಏರ್ ಗ್ರಾಹಕರಿಗೆ ನೀಡಲಿದೆ ದೊಡ್ಡ ಉಡುಗೊರೆ

Pinterest LinkedIn Tumblr

ಕಡಿಮೆ ಬೆಲೆಯ ವಿಮಾನಯಾನ ಗೋ ಏರ್ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆ ಗೋ ಏರ್ ದೀಪಾವಳಿ ಪೂರ್ವ ಕೊಡುಗೆಯನ್ನು ಪ್ರಕಟಿಸಿದೆ. ಗೋ ಏರ್ 24 ಗಂಟೆಗಳ ಸೂಪರ್ ಸೇವರ್ ಡೀಲ್ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ಕನಿಷ್ಠ 1,296 ರೂಪಾಯಿಗಳಿಗೆ ಫ್ಲೈಟ್ ಟಿಕೆಟ್ ಕಾಯ್ದಿರಿಸಬಹುದು.

ಗೋ ಏರ್ ನ 24 ಗಂಟೆಗಳ ಪೂರ್ವ ದೀಪಾವಳಿ ಹಬ್ಬದ ಕೊಡುಗೆ ಅಕ್ಟೋಬರ್ 16 ರಿಂದ ಪ್ರಾರಂಭವಾಗಿದೆ. ಅಂದರೆ ಅಕ್ಟೋಬರ್ 16ರ ಮಧ್ಯಾಹ್ನ 3 ಗಂಟೆಗೆ ಶುರುವಾಗಿದ್ದು ಆಫರ್ ಅಕ್ಟೋಬರ್ 17ರ ಮೂರು ಗಂಟೆಯವರೆಗೆ ಇರಲಿದೆ. ಅಂದ್ರೆ ಇಂದು ಮಧ್ಯಾಹ್ನ 3 ಗಂಟೆಯವರೆಗೆ ಆಫರ್ ಇರಲಿದೆ.

ಗೋ ಏರ್ ಪ್ರಕಾರ, ಗ್ರಾಹಕರು ಅಂತರರಾಷ್ಟ್ರೀಯ ಮತ್ತು ದೇಶೀಯ ಮಾರ್ಗಗಳಲ್ಲಿ 1,296 ರೂಪಾಯಿಗಳಿಗೆ ವಿಮಾನ ಟಿಕೆಟ್ ಕಾಯ್ದಿರಿಸಬಹುದು. ಇದು ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ. ಗೋ ಏರ್ ನ ಎಲ್ಲಾ ಮಾರ್ಗಗಳಲ್ಲಿ ಈ ಕೊಡುಗೆ ಅನ್ವಯವಾಗುತ್ತದೆ. ಗೋಏರ್ 33 ಸ್ಥಳಗಳಿಗೆ ವಿಮಾನ ಸೇವೆಗಳನ್ನು ಒದಗಿಸುತ್ತಿದೆ.

Comments are closed.