ಮುಂಬೈ

 ಅನಿಲ್ ಕುಂಬ್ಳೆ ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಮುಖ್ಯ ಕೋಚ್ ಆಗಿ ನೇಮಕ

Pinterest LinkedIn Tumblr

ಮೊಹಾಲಿ, ಅ.11: ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಮುಂಬರುವ ಋತುವಿನಲ್ಲಿ ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಕುಂಬ್ಳೆ ಕಿಂಗ್ಸ್ ಇಲೆವೆನ್ ಮುಖ್ಯ ಕೋಚ್ ಆಗಿದ್ದ ನ್ಯೂಝಿಲ್ಯಾಂಡ್‌ನ ಮೈಕ್ ಹೆಸನ್ ಅವರಿಂದ ತೆರವಾದ ಸ್ಥಾನ ತುಂಬಲಿದ್ದಾರೆ.

ಭಾರತದ ಮಾಜಿ ಕೋಚ್ ಕುಂಬ್ಳೆ ಐದು ಋತುವಿನಲ್ಲಿ ಪಂಜಾಬ್ ಕೋಚ್ ಆಗಿ ನೇಮಕವಾಗಿರುವ ಐದನೇ ಕೋಚ್ ಆಗಿದ್ದಾರೆ. ಕುಂಬ್ಳೆ ಐಪಿಎಲ್ ಫ್ರಾಂಚೈಸಿಯಲ್ಲಿ ಮೂರನೇ ಬಾರಿ ಪ್ರಮುಖ ಹುದ್ದೆ ನಿಭಾಯಿಸಲಿದ್ದಾರೆ. ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಕುಂಬ್ಳೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ಸಲಹೆಗಾರರಾಗಿಯೂ, 2013ರಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ನ ಸಲಹೆಗಾರನಾಗಿಯೂ ಕಾರ್ಯನಿರ್ವಹಿಸಿದ್ದರು.

ಪಂಜಾಬ್ ಇನ್ನಷ್ಟೇ ಐಪಿಎಲ್ ಪ್ರಶಸ್ತಿ ಜಯಿಸಬೇಕಾಗಿದೆ. ಮಾಜಿ ನಾಯಕ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಕುಂಬ್ಳೆ ಮೇಲಿದೆ.

Comments are closed.