ಮುಂಬೈ

ಅಮೆರಿಕದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಹಿಂದಿ ಬರದಿದ್ದರೆ ತಮಿಳುನಾಡಿಗೆ ಹಿಂದಿರುಗು ಎಂದ ಪ್ರಸಂಗ!

Pinterest LinkedIn Tumblr


ಮುಂಬಯಿ: ಅಮೆರಿಕದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಹಿಂದಿ ಬರುತ್ತಿಲ್ಲವೆಂದು ಮುಂಬಯಿ ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆ ವಿಭಾಗದ ಅಧಿಕಾರಿಯೋರ್ವ ಕ್ಲಿಯರೆನ್ಸ್ ನೀಡಲು ನಿರಾಕರಿಸಿದ ಪ್ರಸಂಗ ನಡೆದಿದೆ.

ಮೂಲತಃ ತಮಿಳುನಾಡಿನ ಅಬ್ರಾಹಂ ಸಾಮ್ಯುಯೆಲ್ ಅಮೆರಿಕದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ರಜೆ ಅವಧಿಯಲ್ಲಿ ತಮಿಳುನಾಡಿನ ಮನೆಗೆ ಬಂದಿದ್ದ ಅವರು, ಮರಳಿ ಅಮೆರಿಕಾಗೆ ಹೋಗಲು ಮುಂಬಯಿ ವಿಮಾನ ನಿಲ್ದಾಣದ ಮೂಲಕ ಹೋಗುವವರಿದ್ದರು.

ಆ ಸಂದರ್ಭದಲ್ಲಿ ಏರ್‌ಪೋರ್ಟ್‌ನ ಅಧಿಕಾರಿ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. ತನಗೆ ಇಂಗ್ಲಿಷ್ ಮತ್ತು ತಮಿಳು ಮಾತ್ರ ಗೊತ್ತಿದೆ, ಹಿಂದಿ ಗೊತ್ತಿಲ್ಲ ಎಂದಾಗ ಇಮಿಗ್ರೇಷನ್ ವಿಭಾಗದ ಅಧಿಕಾರಿ, ಹಿಂದಿ ಗೊತ್ತಿಲ್ಲವೇ? ಹಾಗಿದ್ದರೆ ತಮಿಳುನಾಡಿಗೆ ವಾಪಸ್ ಹೋಗು ಎಂದು ನಿಂದಿಸಿದ್ದಾಗಿ ಅಬ್ರಾಹಂ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಮಯದ ಅಭಾವದಿಂದ ದೂರು ದಾಖಲಿಸಲು ಸಾಧ್ಯವಾಗಿಲ್ಲ ಎಂದಿರುವ ಅಬ್ರಾಹಂ, ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಹುಲ್ ಗಾಂಧಿ, ಸ್ಟಾಲಿನ್ ಮತ್ತು ಶಶಿ ತರೂರ್‌ರನ್ನು ಟ್ಯಾಗ್ ಮಾಡಿ ತನಗಾದ ಕಹಿ ಅನುಭವ ಹೇಳಿಕೊಂಡಿದ್ದಾರೆ.

ಬಲವಂತದ ಹಿಂದಿ ಹೇರಿಕೆ ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ, ಅಬ್ರಾಹಂ ಟ್ವೀಟ್ ಮಹತ್ವ ಪಡೆದುಕೊಂಡಿದೆ.

Comments are closed.