ರಾಷ್ಟ್ರೀಯ

ನೂತನ ಶಿಕ್ಷಣ ಕಾಯ್ದೆಯನ್ವಯ 8ನೇ ತರಗತಿವರೆಗೆ ಹಿಂದಿ ಕಡ್ಡಾಯ!

Pinterest LinkedIn Tumblr


ನವದೆಹಲಿ: ನೂತನ ಶಿಕ್ಷಣ ಕಾಯ್ದೆಗನುಗುಣವಾಗಿ ಹಿಂದಿ ಭಾಷೆಯನ್ನು ಎಂಟನೇ ಕ್ಲಾಸ್ ವರೆಗೆ ಕಡ್ಡಾಯ ಮಾಡಲಾಗುತ್ತಿದೆ. ಏಕರೂಪ ಶಿಕ್ಷಣವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗ ದೇಶಾದ್ಯಂತ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ದೇವನಾಗರಿಯಲ್ಲಿ ಬುಡಕಟ್ಟು ಭಾಷೆಗಳನ್ನು ಹಿಡಿದು ಕಲಿಸುವ ಯೋಜನೆ ಇದೆ.

ಒಂಬತ್ತು ಸದಸ್ಯರ ನೇತೃತ್ವದ ಕೆ ಕಸ್ತೂರಿರಂಗನ್ ಸಮಿತಿ ಸಿದ್ದಪಡಿಸಿದ ವರದಿಗನುಗುಣವಾಗಿ ವರದಿಯಲ್ಲಿ ಈ ಕೆಲವು ಪ್ರಮುಖ ಶಿಫಾರಸ್ಸುಗಳನ್ನು ಮಾಡಲಾಗಿದೆ.ಭಾರತ ಕೇಂದ್ರಿತ ಹಾಗೂ ವೈಜ್ಞಾನಿಕ ಕಲಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಶಿಫಾರಸ್ಸುಗಳನ್ನು ಜಾರಿಗೆ ತರುವಂತಹ ಯೋಜನೆಯತ್ತ ಸರ್ಕಾರ ಹೆಜ್ಜೆಯಿಟ್ಟಿದೆ ಎನ್ನಲಾಗಿದೆ.

2018 ರ ಡಿಸೆಂಬರ್ 31 ರ ಅಂತ್ಯಕ್ಕೆ ಮೊದಲು ಸಮಿತಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ನೂತನ ಶಿಕ್ಷಣ ಕಾಯ್ದೆ ವರದಿಯನ್ನು ಹಸ್ತಾಂತರಿಸಿದೆ ಎಂದು ಮೂಲಗಳು ತಿಳಿಸಿವೆ. “ನಾವು ವರದಿಯನ್ನು ಔಪಚಾರಿಕವಾಗಿ ಒಪ್ಪಿಸಲು ಮಾನವ ಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಿದ್ದೇವೆ” ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ “ಸಮಿತಿಯ ವರದಿ ಸಿದ್ಧವಾಗಿದೆ ಮತ್ತು ಸದಸ್ಯರು ನೇಮಕಾತಿಯನ್ನು ಬಯಸಿದ್ದಾರೆ. ನಾನು ಸಂಸತ್ತಿನ ಅಧಿವೇಶನದ ನಂತರ ವರದಿಯನ್ನು ಪಡೆಯುತ್ತೇನೆ. ಹಿಂದಿಯನ್ನು ಕಡ್ಡಾಯಗೊಳಿಸುವ ಕುರಿತಾಗಿ ಕರಡು ವರದಿ ಶಿಫಾರಸ್ಸು ಮಾಡಿಲ್ಲ ಎಂದು ತಿಳಿಸಿದರು.

Comments are closed.