ರಾಷ್ಟ್ರೀಯ

ಅವಳಿ ಮಕ್ಕಳಿಗೆ ಜನ್ಮ ನೀಡಿದ ಹುತಾತ್ಮ ಯೋಧನ ಮಡದಿ: ಸೇನೆಗೆ ಸೇರಿಸುತ್ತೇನೆಂದ ತಾಯಿ!

Pinterest LinkedIn Tumblr


ದೇಶಕ್ಕಾಗಿ ಪ್ರಾಣ ಅರ್ಪಿಸಿರುವ ಹುತಾತ್ಮ ಯೋಧನ ಪತ್ನಿ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಪತಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹಾಗೂ ದೇಶ ಸೇವೆ ಮಾಡಲು ತನ್ನಿಬ್ಬರು ಮಕ್ಕಳನ್ನು ಸೇನೆಗೆ ಸೇರಿಸುತ್ತೇನೆ ಎಂದಿರುವ ದಿಟ್ಟಿತನದ ಮಾತುಗಳು ಇದೀಗ ವೈರಲ್ ಆಗಿದೆ.

ಜಮ್ಮು-ಕಾಶ್ಮೀರದ ತಂಗಧರ್ ಸೆಕ್ಟರ್‌ನಲ್ಲಿ ಪಾಪಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ರಾಜಸ್ಥಾನದ ಜೋಧಪುರ ಮೂಲದ ಗಣಪತ್ ಎಂಬ ಯೋಧ ಹುತಾತ್ಮರಾಗಿದ್ದರು.

ಪಾಪಿಗಳ ಅಟ್ಟಹಾಸಕ್ಕೆ ಗಣಪತ್ ವೀರಮರಣ ಹೊಂದಿದ ಸಂದರ್ಭದಲ್ಲಿ ಅವರ ಪತ್ನಿ ಗರ್ಭಿಣಿಯಾಗಿದ್ದರು. ಬರಸಿಡಿಲಿನಂತೆ ಬಂದ ಪತಿಯ ಸಾವಿನ ಸುದ್ದಿಯಿಂದ ಪತ್ನಿ ಆಘಾತಕ್ಕೊಳಗಾಗಿದ್ದರು. ಆದರೆ, ಪತಿ ಮನೆಯವರ ಆರೈಕೆಯಲ್ಲೀಗ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪತ್ನಿ ಹಾಗೂ ಮುದ್ದಾದ ಮಕ್ಕಳನ್ನು ಕಣ್ತುಂಬಿಕೊಳ್ಳಲು ಪತಿಯೇ ಇಲ್ಲ ಎನ್ನುವ ನೋವು ಬಾಣಂತಿಯನ್ನು ಕಾಡುತ್ತಿದೆ.

‘ನನ್ನ ಪತಿ ಸಾವನ್ನಪ್ಪಿ 8 ತಿಂಗಳು ಕಳೆದಿದ್ದು, 8 ವರ್ಷದಂತೆ ಭಾಸವಾಗುತ್ತಿದೆ. ಪತಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆಂಬ ಹೆಮ್ಮೆ ನನ್ನಲಿದ್ದು, ಘಟನೆಯಿಂದ ಎದೆಗುಂದುವುದಿಲ್ಲ. ನನ್ನಿಬ್ಬರು ಮಕ್ಕಳು ದೊಡ್ಡವರಾಗುವುದನ್ನೇ ಕಾಯುತ್ತಿದ್ದೇನೆ. ಅವರಿಬ್ಬರನ್ನು ಸೇನೆಗೆ ಸೇರಿಸುತ್ತೇನೆ’ ಎಂದು ಹುತಾತ್ಮ ಯೋಧನ ಪತ್ನಿ ದಿಟ್ಟತನ ಪ್ರದರ್ಶಿಸಿರುವುದು ಇತರರಿಗೂ ಮಾದರಿಯಾಗಿದೆ.

‘ಪುತ್ರ ಗಣಪತ್ ಸೊಸೆಯ ಹೊಟ್ಟೆಯಲ್ಲಿ ಮೊಮ್ಮಕ್ಕಳ ರೂಪದಲ್ಲಿ ಬಂದಿದ್ದಾನೆ’ ಎಂದು ಯೋಧನ ತಾಯಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

Comments are closed.