ಕರ್ನಾಟಕ

ಇಂಜೆಕ್ಷನ್‌ ದುಷ್ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

Pinterest LinkedIn Tumblr


ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಿದ್ದ 7 ತಿಂಗಳ ಗರ್ಭಿಣಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಘಟನೆ ಬಳಿಕ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ ಪರಿಣಾಮ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಅಂಬೇಡ್ಕರ್‌ ಬಡಾವಣೆಯ ನಿವಾಸಿಯಾಗಿದ್ದ ನೇತ್ರಾವತಿ ಎಂಬ ಮಹಿಳೆ ಮೃತ ಗರ್ಭಿಣಿ. ತಿಂಗಳ ತಪಾಸಣೆಗೆಂದು ಬಂದಿದ್ದ ವೇಳೆ ಇಂಜೆಕ್ಷನ್‌ ನೀಡಲಾಗಿದ್ದು ಆ ಬಳಿಕ ರಕ್ತದ ಒತ್ತಡ ಕಡಿಮೆಯಾಗಿ ಅಸ್ವಸœರಾಗಿ ಕುಸಿದು ಬಿದ್ದಿದ್ದಾರೆ.ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ರಸ್ತೆ ತಡೆದು ಪ್ರತಿಭಟನೆ
ಗರ್ಭಿಣಿ ಸಾವನ್ನಪ್ಪಿದ ಬಳಿಕ ತಂದೆ,ತಾಯಿ ಕುಟುಂಬಸ್ಥರು ಸೇರಿ ನೂರಾರು ಮಂದಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು. ತಂದೆ ಮತ್ತು ತಾಯಿ, ಮಗಳ ಸಾವಿಗೆ ನ್ಯಾಯ ಕೊಡಿ ಎಂದು ಗೋಳಿಟ್ಟಿದ್ದಾರೆ.

Comments are closed.