ಮುಂಬೈ

ಶಿವಸೇನೆಗೆ ಖಡಕ್ ಎಚ್ಚರಿಕೆ ನೀಡಿದ ಅಮಿತ್ ಶಾ ! ಮೈತ್ರಿ ಬಗ್ಗೆ ಹೇಳಿದ್ದೇನು…?

Pinterest LinkedIn Tumblr

ಮುಂಬೈ: ಮೈತ್ರಿ ಮಾಡಿಕೊಂಡರೆ ಮಿತ್ರ ಪಕ್ಷ ಗೆಲ್ಲುವಂತೆ ಮಾಡುತ್ತೇವೆ. ಒಂದು ವೇಳೆ ಆಗದಿದ್ದಲ್ಲಿ ಮೈತ್ರಿ ಪಕ್ಷವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣುವಂತೆ ಮಾಡುತ್ತೇವೆಂದು ಶಿವಸೇನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಎಚ್ಚರಿಸಿದ್ದಾರೆ.

ಯಾರೇ ಸವಾಲು ಎಸೆದರು ಅದನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆಂದು ಶಿವಸೇನೆ ನೀಡಿರುವ ಹೇಳಿಕೆಗೆ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಒಸ್ಮಾನಾಬಾದ್’ನ ಲಾತೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅಮಿತ್ ಶಾ ಅವರು, ಮೈತ್ರಿ ಬಗ್ಗೆ ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗವ ಅಗತ್ಯವಿಲ್ಲ. ಮೈತ್ರಿ ಪಕ್ಷಗಳು ನಮ್ಮೊಂದಿಗೆ ಕೈಜೋಡಿಸುವುದನ್ನು ಮುಂದುವರೆಸಿದರೆ, ಅವರು ಗೆಲ್ಲುವಂತೆ ಮಾಡುತ್ತೇವೆ. ಇಲ್ಲದೇ ಹೋದಲ್ಲಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣುವಂತೆ ಮಾಡುತ್ತೇವೆ. ಪಕ್ಷದ ಕಾರ್ಯಕರ್ತರು ಪ್ರತೀ ಬೂತ್ ನಲ್ಲಿಯೂ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ನಾವು ಗೆದ್ದಿದ್ದೇ ಆದರೆ, ನಮ್ಮ ಸಿದ್ಧಾಂತಗಳು ಇನ್ನೂ 50 ವರ್ಷಗಳ ಕಾಲ ಮುಂದುವರೆಯಲಿದೆ. ಚುನಾವಣೆಯಲ್ಲಿ ಗೆಲ್ಲಲು ನಾವು ಮತ್ತಷ್ಟು ಶ್ರಮವನ್ನು ಹಾಕಬೇಕು. 2014ರಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ 74 ಸೀಟುಗಳನ್ನು ಗೆದ್ದಿತ್ತು. ಈ ಬಾರಿ ಸಮಾಜವಾದಿ ಪಕ್ಷ ಹಾಗೂ ಬಹಜನ ಸಮಾಜ ಪಕ್ಷ ಕೈಜೋಡಿಸಿದರೂ, ನಾವು 74 ಸೀಟುಗಳನ್ನು ಗೆಲ್ಲುತ್ತೇವೆಂದಿದ್ದಾರೆ.

ಮಹಾರಾಷ್ಟ್ರದಲ್ಲಿ 48 ಸೀಟುಗಳ ಪೈಕಿ ಬಿಜೆಪಲಿ 40 ಸ್ಥಾನಗಳನ್ನು ಗೆಲ್ಲಬೇಕಿದೆ. ಶಿವಸೇನೆ ಮೈತ್ರಿ ಕುರಿತು ಇದೇ ಮೊದಲ ಬಾರಿಗೆ ಪಕ್ಷ ದೃಢ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾತನಾಡಿ, ಶಿವಸೇನಾ ಮೈತ್ರಿ ಕುರಿತಂತೆ ಪಕ್ಷದ ಅಧ್ಯಕ್ಷರು ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ 48 ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಗೆಲ್ಲಲು ಪಕ್ಷ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

2014ರ ಗೆಲುವಿಗಿಂದಲೂ 2019 ಗೆಲವು ದೊಡ್ಡದಾಗಿರಲಿದೆ. ಕಳೆದ ಬಾರಿ ನಾವು 122 ಸೀಟುಗಳನ್ನು ಗೆದ್ದಿದ್ದೆವು. 1.50 ಕೋಟಿ ಮತಗಳನ್ನು ಪಡೆದುಕೊಂಡಿದ್ದೆವು. ಮತ್ತೆ ನಾವು ಅಧಿಕಾರಕ್ಕೆ ಬರಲು 2 ಕೋಟಿ ಮತಗಳು ಬೇಕು. ರಾಜ್ಯ ಸರ್ಕಾರದ ನೀತಿಗಳಿಂದ ಸಾಕಷ್ಟು ಜನರಿಗೆ ಲಾಭವಾಗಿದೆ ಎಂದು ಹೇಳಿದ್ದಾರೆ.

Comments are closed.