ಮುಂಬೈ

ರಸ್ತೆ ನಿಯಮ ಉಲ್ಲಂಘನೆ: ಮಹಾರಾಷ್ಟ್ರದ ಮುಖ್ಯಮಂತ್ರಿಗೆ ದಂಡ

Pinterest LinkedIn Tumblr


ಮುಂಬೈ: ರಸ್ತೆ ನಿಯಮ ಉಲ್ಲಂಘಸಿ ಅತೀ ವೇಗದಿಂದ ಮುಂಬೈ ಮಹಾನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಕಾರಣಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಮುಂಬೈ ಪೊಲೀಸರು ಸುಮಾರು.13 ಸಾವಿರ ರು.ದಂಡ ವಿಧಿಸಿದ್ದಾರೆ.

2018ರ ಜ.12 ರಿಂದ 2018 ಆಗಸ್ಟ್‌ 12ರವರೆಗಿನ ಅವಧಿಯಲ್ಲಿ ಮುಖ್ಯಮಂತ್ರಿ ಫಡ್ನವಿಸ್ ವಾಹನ 13 ಬಾರಿ ಪ್ರಯಾಣ ಮಾಡಿದೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು ಹೀಗಾಗಿ ಪ್ರತಿ ನಿಯಮ ಉಲ್ಲಂಘನೆಗೆ 1 ಸಾವಿರ ರುಪಾಯಿಯಂತೆ ಒಟ್ಟು 13 ಸಾವಿರ ರುಪಾಯಿ ದಂಡ ವಿಧಿಸಿದೆ.

13 ಸಾವಿರ ರುಪಾಯಿ ದಂಡ ವಿಧಿಸಿದ ಬಳಿಕ ಮುಂಬೈ ಪೊಲೀಸರು ಚಲನ್ ರದ್ದು ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹಮ್ಮದ್ ಆರ್ ಟಿಐಯಡಿ ಅರ್ಜಿ ಸಲ್ಲಿಸಿದ್ದರು.

Comments are closed.