ಅಂತರಾಷ್ಟ್ರೀಯ

ಲಂಡನ್‌ನಲ್ಲಿ ಸರಣಿ ಅಪಘಾತ: ರಾಜ್ಯದ ಹೊಸದುರ್ಗದ ವ್ಯಕ್ತಿ ಸಾವು

Pinterest LinkedIn Tumblr


ಮೈಸೂರು: ಲಂಡನ್‌ನಲ್ಲಿ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಹೊಸದುರ್ಗ ಮೂಲದವರೊಬ್ಬರು
ಮೃತಪಟ್ಟಿದ್ದಾರೆ. ಮೃತರನ್ನು ಸುದೀಪ್‌ ಸಿದ್ದಜ್ಜರ (38) ಎಂದು ಗುರುತಿಸಲಾಗಿದೆ.

ಮೈಸೂರು ಮೂಲದ ಯುವತಿಯನ್ನು ವಿವಾಹವಾಗಿದ್ದ ಸುದೀಪ್‌, ಕಳೆದ ಕೆಲವು ವರ್ಷದಿಂದ ಲಂಡನ್‌ನಲ್ಲಿ ವಾಸವಾಗಿದ್ದರು. ಲಂಡನ್‌ನ ಖಾಸಗಿ ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಲಂಡನ್‌ನ ಹೊರವರ್ತುಲ ರಸ್ತೆ ಎಂ 25ನಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸುದೀಪ್‌ ಮೃತಪಟ್ಟಿದ್ದಾರೆ. ಮೃತ ಸುದೀಪ್‌, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಸುದೀಪ್‌ ಮೂಲತಃ ಹೊಸದುರ್ಗದವರಾಗಿದ್ದು, ಸದ್ಯ ಅವರ ತಂದೆ, ತಾಯಿ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ವಾಸವಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನೆಲೆಸಿರುವ ಸುದೀಪ್‌ ಅವರ ಅತ್ತೆ-ಮಾವ ಲಂಡನ್‌ಗೆ ತೆರಳಿದ್ದಾರೆ.

Comments are closed.