ಮುಂಬೈ

17ರ ಅಪ್ರಾಪ್ತನ ಮದುವೆಯಾಗಿ 5 ತಿಂಗಳ ಹೆಣ್ಣು ಮಗು ಪಡೆದ ಮಹಿಳೆ ಬಂಧನ!

Pinterest LinkedIn Tumblr

ಮುಂಬಯಿ: ಅವನಿಗೆ 17 ವರ್ಷ. ಅವಳಿಗೆ 22! ಕಳೆದ ಕೆಲವು ವರ್ಷದಿಂದ ಇಬ್ಬರೂ ಸಹಮತದ ಲೈಂಗಿಕ ಸಂಪರ್ಕದಲ್ಲಿದ್ದು, ಕಳೆದ ವರ್ಷ ಮದುವೆಯಾಗಿದೆ. ಈಗ ಅವರಿಗೆ ಐದು ತಿಂಗಳ ಹೆಣ್ಣು ಮಗುವಿದೆ!
ಈ ನಡುವೆ, ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಜತೆಗೆ, ಅಪಹರಣ, ಬಾಲ್ಯ ವಿವಾಹದ ಸೆಕ್ಷನ್‌ಗಳೂ ಸೇರಲಿವೆ. ಈ ಎಲ್ಲ ಬೆಳವಣಿಗೆಗಳಿಗೆ ಕಾರಣ, ಹುಡುಗನ ತಾಯಿ!
ಅಷ್ಟಕ್ಕೂ ಆಗಿದ್ದೇನು?
ಈ ಕುತೂಹಲಕಾರಿ ಪ್ರಸಂಗಕ್ಕೆ ಎರಡು ವರ್ಷದ ಇತಿಹಾಸವಿದೆ.
22 ವರ್ಷದ ಮಹಿಳೆಗೆ ಈ ಹಿಂದೆ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಆಗಿತ್ತು. ಈ ನಡುವೆ, ಹುಡುಗ ಆಗಾಗ ಆಕೆಯ ಮನೆಗೆ ಹೋಗಿಬರುತ್ತಿದ್ದ. ಆರಂಭದಲ್ಲಿ ಮನೆಯವರಿಗೆ ಯಾವ ಸಂಶಯವೂ ಬರಲಿಲ್ಲ. ಯಾಕೆಂದರೆ, ಅವನಿನ್ನೂ 16 ವರ್ಷದವನಾಗಿದ್ದ. ಈ ನಡುವೆ, ಅವನ ವರ್ತನೆಗಳಲ್ಲಿ ಬದಲಾವಣೆ ಕಂಡಾಗ ಅವಳ ಮನೆಗೆ ಹೋಗಬಾರದೆಂದು ತಾಕೀತು ಮಾಡಿದರು.
ಆದರೆ, ಹುಡುಗ ಒಪ್ಪಲಿಲ್ಲ. ಈ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಫೇಲಾದ. ಸರಿಯಾಗಿ ವಿಚಾರಣೆ ನಡೆಸಿದಾಗ ಅವರಿಬ್ಬರ ನಡುವೆ ಲೈಂಗಿಕ ಸಂಪರ್ಕ ಇರುವುದು ತಿಳಿಯಿತು. ದೂರ ಹೋದರೆ ಸೀಮೆ ಎಣ್ಣೆ ಸುರಿದುಕೊಂಡು ಸಾಯುವುದಾಗಿ ಬೆದರಿಸುತ್ತಿದ್ದಾಳೆ ಎಂದು ಬಾಲಕ ವಿವರಿಸಿದ್ದ.

ಕಳೆದ ವರ್ಷದ ನವೆಂಬರ್‌ 23ರಂದು ರಾತ್ರಿ 10 ಗಂಟೆಗೆ ತನ್ನ ಹೆತ್ತವರು ಮತ್ತು ಸೋದರನ ಜತೆ ಹುಡುಗನ ಮನೆಗೆ ಬಂದ ಆಕೆ, ”ನವೆಂಬರ್‌ 8ರಂದು ನಮ್ಮ ಮದುವೆಯಾಗಿದೆ. ಇನ್ನು ಮುಂದೆ ನಾನು ಅದೇ ಮನೆಯಲ್ಲಿ ಇರುತ್ತೇನೆ,” ಎಂದಳು. ಜಗಳ ತಾರಕಕ್ಕೆ ಹೋದಾಗ ರಾತ್ರಿ 11 ಗಂಟೆಗೆ ಮನೆಯಿಂದ ಹೊರಹೋದರು. ಜತೆಗೆ ಆಕೆಯ ‘ಗಂಡ’ನೂ ಹೋದ!
ಅದಾದ ಬಳಿಕ ಡಿಸೆಂಬರ್‌ನಲ್ಲಿ ಹುಡುಗನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಈಗಷ್ಟೇ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈಗ ದಂಪತಿಗೆ ಐದು ವರ್ಷದ ಮಗುವಿದ್ದು, ಬೈಕುಲಾ ಜೈಲಿನಲ್ಲಿ ತಾಯಿ ಜತೆ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ.
ಪ್ರಾಪ್ತನೆಂದು ವಾದ: ಈ ನಡುವೆ, ಮಹಿಳೆಯು ಹುಡುಗನಿಗೆ 17 ವರ್ಷವಲ್ಲ. ಅವನು ಪ್ರಾಪ್ತನಾಗಿದ್ದಾನೆ ಎಂದು ವಾದಿಸುತ್ತಿದ್ದಾರೆ. ಆದರೆ, ಹುಡುಗನ ತಾಯಿ ಅವನಿಗೆ 17 ವರ್ಷ ಎಂಟು ತಿಂಗಳು, ಅವನ ಅಕ್ಕನಿಗೆ 18 ವರ್ಷ ದಾಟಿದೆ ಅಷ್ಟೇ ಎನ್ನುತ್ತಿದ್ದಾರೆ.

ಕಾನೂನು ಹೇಳುವುದೇನು?
ಬಾಲ್ಯ ವಿವಾಹ ಕಾಯಿದೆ ಕಾಯಿದೆ ಪ್ರಕಾರ, 21 ವರ್ಷದೊಳಗಿನ ಪುರುಷರನ್ನು ‘ಮಗು’ ಎಂದೇ ಪರಿಗಣಿಸಲಾಗುತ್ತದೆ. ಹೆಣ್ಣು ಮಕ್ಕಳು 18 ವರ್ಷ ಆಗುವವರೆಗೆ ಮಕ್ಕಳೇ.

Comments are closed.