ರಾಷ್ಟ್ರೀಯ

ರಾಜ್ಯ ಸರಕಾರಕ್ಕೆ 50 ಸಾವಿರ ರೂಪಾಯಿ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌..!

Pinterest LinkedIn Tumblr


ದೆಹಲಿ: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡದ ಸರ್ಕಾರಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂ ದಂಡ ವಿಧಿಸಿದೆ.

ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂ ದಂಡ ವಿಧಿಸಿದೆ. ಜಸ್ಟೀಸ್ ಮದನ್ ಬಿ ಲೋಕುರ್ ಅವರಿದ್ದ ಪೀಠ ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಗೋವಾ ರಾಜ್ಯಗಳಿಗೆ ದಂಡ ವಿಧಿಸಿದೆ.

ರಾಜಸ್ಥಾನದಲ್ಲಿ ಶೇ. 50 ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ, ಗೋವಾದಲ್ಲಿ ಶೇ.60, ಅಸ್ಸಾಂನಲ್ಲಿ ಶೇ.40, ಕರ್ನಾಟಕದಲ್ಲಿ ಶೇ.50, ಮಹಾರಾಷ್ಟ್ರದಲ್ಲಿ ಶೇ 50, ಒಡಿಶಾದಲ್ಲಿ ಶೇ 33 ರಷ್ಟು, ಉತ್ತರ ಪ್ರದೇಶದಲ್ಲಿ ಶೇ. 80 ರಷ್ಟು ಹುದ್ದೆಗಳು ಖಾಲಿ ಇವೆ. ಈಗಾಗಲೇ ಖಾಲಿ ಇರುವ ಹುದ್ದೆಗಳ ಕುರಿತು ಸರ್ಕಾರಗಳಿಗೆ ಮಾಹಿತಿ ಸಲ್ಲಿಸಲು ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾಲ್ಕು ವಾರದೊಳಗಾಗಿ ಸುಪ್ರೀಂಕೋರ್ಟ್ ಲೀಗಲ್ ಸರ್ವೀಸಸ್ ಕಮಿಟಿಗೆ 50 ಸಾವಿರ ರೂ ಸಂದಾಯ ಮಾಡುವಂತೆ ಕೋರ್ಟ್ ಆದೇಶಿಸಿದೆ

Comments are closed.