ಕರ್ನಾಟಕ

ಕನ್ನಡ ಮಾತು ಅಕ್ಷರ ರೂಪಕ್ಕಿಳಿಸುವ ಆ್ಯಪ್‌…!

Pinterest LinkedIn Tumblr

ಅಂದು ವೇದವ್ಯಾಸ ಮುನಿ ಕಥೆ ಹೇಳುತ್ತಾ ಹೋದಂತೆ ಗಣಪತಿ ಮಹಾಭಾರತ ಗ್ರಂಥ ಶಬ್ದಗಳ ಒಳ ಮರ್ಮ ಅರಿತು ನಿರಂತರವಾಗಿ ಬರೆದನಂತೆ….

ಈಗ ನೀವು ಮಾತನಾಡುತ್ತಾ ಹೋದರೆ ಅದು ಅಕ್ಷರ ರೂಪಕ್ಕೆ ಇಳಿಯುವಂಥ ತಂತ್ರಜ್ಞಾನ ಬಂದಿದೆ.

‘ಕನ್ನಡ ವಾಯ್ಸ್‌ ನೋಟ್ಸ್‌ ‘ ಆ್ಯಪ್‌ ಮೂಲಕ ನಾವಾಡಿದ ನುಡಿಯನ್ನು ಅಕ್ಷರ ರೂಪಕ್ಕಿಳಿಸುವ ಕನಸು ಈಗ ನನಸಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ನಿಂದ ‘ಕನ್ನಡ ವಾಯ್ಸ್‌ ನೋಟ್ಸ್‌ ‘ ಆ್ಯಪ್‌ ಡೌನ್‌ಲೋಡ್‌ ಮಾಡಿ, ನಿಮ್ಮ ಇಲ್ಲಾ ಅನ್ಯರ ಮಾತನ್ನು ದಾಖಲಿಸಿದರೆ ಅಕ್ಷರ ರೂಪಕ್ಕೆ ಪರಿವರ್ತನೆಯಾದ ಪಠ್ಯವನ್ನು ವಾಟ್ಸ್ಯಾಪ್‌ ಮೂಲಕ ವಿವಿಧ ಮಾಧ್ಯಮಗಳಲ್ಲಿ ಅನ್ಯರಿಗೆ ರವಾನಿಸಬಹುದು.

‘ಕನ್ನಡ ವಾಯ್ಸ್‌ ನೋಟ್ಸ್‌ ‘ ಆ್ಯಪ್‌ ಹೀಗಿದೆ ನೋಡಿ

ಇಂಗ್ಲೀಷ್‌, ಹಿಂದಿ, ಮರಾಠಿ, ಗುಜರಾತಿ, ಮಲಯಾಳ, ತೆಲುಗು, ತಮಿಳು, ಕನ್ನಡ ಹಾಗೂ ಬಾಂಗ್ಲಾ ಭಾಷಿಗರಿಗೆ ಸದ್ಯಕ್ಕೆ ವಾಯ್ಸ್‌ ನೋಟ್ಸ್‌ ಅನುಕೂಲವಿದೆ. ಪತ್ರಿಕೆಗಳಿಗೆ ಬರಹ, ಬ್ಲಾಗ್‌, ಇ ಮೇಲ್‌ ಬರಹಕ್ಕಿದು ಸೂಕ್ತ.

ಗೂಗಲ್‌ ಕ್ರೋಮ್‌ (ವರ್ಷನ್‌ 2.5 ಅಥವಾ ಅದಕ್ಕಿಂತ ಹೆಚ್ಚು) ಬ್ರೌಸರ್‌ನಲ್ಲಿ ಮಾತ್ರ ಇದು ಕಾರ್ಯನಿರ್ವಹಿಸುತ್ತದೆ. ಮೈಕ್ರೋಫೋನ್‌ ಸಂಕೇತವನ್ನು ಒತ್ತಿದರೆ ಮಾತು ದಾಖಲಾಗುತ್ತದೆ. ಕಂಪ್ಯೂಟರ್‌ ಇಲ್ಲಾ ಮೊಬೈಲ್‌ನಲ್ಲಿ ಟೈಪ್‌ ಮಾಡುವ ಕಿರಿಕಿರಿ, ಕೈ ನೋಯಿಸಿಕೊಳ್ಳುವ ತಾಪತ್ರಯವಿಲ್ಲ.

ಈ ಸೇವೆ ಧರ್ಮಾರ್ಥ. ಉತ್ತಮ ಫಲಿತಾಂಶ ಅರ್ಥಾತ್‌ ನೀವಾಡಿದ ಶಬ್ದ ಸರಿಯಾಗಿ ಪಠ್ಯಾಂತರವಾಗಬೇಕಿದ್ದರೆ ಸ್ಪಷ್ಟವಾಗಿ, ನಿಧಾನವಾಗಿ, ಗಟ್ಟಿಯಾಗಿ ಉಚ್ಚಾರಬದ್ಧವಾಗಿ ಮಾತನಾಡಿದರೆ ಪಠ್ಯಾಂತರ ನೀರು ಕುಡಿದಷ್ಟು ಸುಲಭ.

ಯಾರಿಗೆ ಲಾಭ? ಶಿಕ್ಷಕರು, ಉಪನ್ಯಾಸಕರು ಮಾಡುವ ಪಾಠ, ರಾಜಕಾರಣಿಗಳು, ಗಣ್ಯರ ಸುದ್ದಿಗೋಷ್ಠಿ , ಸಭೆ ಸಮಾರಂಭಗಳಲ್ಲಿ ಗೌಜು ಗದ್ದಲವಿದ್ದರೆ ಮಾತು, ಧ್ವನಿ ದಾಖಲಿಸಿ ಪಠ್ಯಾಂತರ ಮಾಡುವುದು ಸ್ವಲ್ಪ ಕಷ್ಟವಾದರೂ,ಬಾಸ್‌ ತನ್ನ ಕಾರ್ಯದರ್ಶಿಗೆ ಡಿಕ್ಟೇಟ್‌ ಮಾಡುವ ಮಾತನ್ನು ದಾಖಲಿಸಿಕೊಳ್ಳಬಹುದು. ಬರೆಯಲು ಸಮಸ್ಯೆಯಿದ್ದವರಿಗಿದು ಅನುಕೂಲ. ಲೇಖನ, ಸುದ್ದಿ, ಬ್ಲಾಗ್‌ ಬರಹಗಳಿಗಿದು ಪ್ರಯೋಜನಕಾರಿ. ಇಂಟರ್ನೆಟ್‌ ಆನ್‌ ಇದ್ದರೆ ಮಾತ್ರ ಇದು ಕಾರ್ಯನಿರ್ವಹಿಸುತ್ತದೆ. ಈಗಿರುವ ಲಿಪಿಕಾರ್‌, ಗೂಗಲ್‌ ನೋಟಿಫಿಕೇಶನ್‌ಗಿಂತ ಕನ್ನಡ ವಾಯ್ಸ್‌ ನೋಟ್ಸ್‌ ಹೆಚ್ಚು ಪರಿಣಾಮಕಾರಿಯಾಗಿದೆ.
“ಕನ್ನಡ ಬರಹಗಾರರಿಗೆ ಅದರಲ್ಲೂ ಇಂಗ್ಲೀಷ್‌ ಕೀ ಸುಲಭ, ಕನ್ನಡ ಕೀ ಕಷ್ಟ ಎನ್ನುವವರಿಗಿದು ಅನುಕೂಲ. ನೀವಾಗಲಿ, ಅನ್ಯರಾಗಲಿ ಆಡುವ ಮಾತು ಸ್ಪಷ್ಟ, ನಿಧಾನವಾಗಿದ್ದರೆ ಸುದ್ದಿ ಮಾಡಲು, ಪತ್ರಿಕೆಗಳಿಗೆ ಬರಹ ಕಳುಹಿಸಲು, ಬ್ಲಾಗ್‌ ಬರಹ…ಇತ್ಯಾದಿಗಳಿಗಿದು ಅನುಕೂಲಕರ.”
-ಡಾ. ಯು. ಬಿ. ಪವನಜ, ಕಾರ್ಯದರ್ಶಿ, ಕರಾವಳಿ ವಿಕಿಮೀಡಿಯನ್ನರು, ಮಂಗಳೂರು

Comments are closed.