ಮುಂಬೈ

ಮಾಡೆಲ್ ಮಾನ್ಸಿ ದೀಕ್ಷಿತ್ ಕೊಂದು ಸೂಟ್‌ಕೇಸ್‌ನಲ್ಲಿಟ್ಟಿದ್ದವನ ಪತ್ತೆಗೆ ನೆರವಾದ ಓಲಾ ಚಾಲಕ

Pinterest LinkedIn Tumblr


ಮುಂಬಯಿ: ಕಳೆದ ಮಂಗಳವಾರ ಮುಂಬಯಿಯಲ್ಲಿ ಹತ್ಯೆಯಾದ ಮಾಡೆಲ್ ಮಾನ್ಸಿ ದೀಕ್ಷಿತ್ ಪ್ರಕರಣದ ಕೊಲೆ ಆರೋಪಿ ಸಯ್ಯದ್ ಹಸನ್‌ ಕುರಿತು ಓಲಾ ಕ್ಯಾಬ್ ಚಾಲಕ ಪೊಲೀಸರಿಗೆ ಸುಳಿವು ನೀಡಿದ್ದ ಎಂದು ಪತ್ತೆಯಾಗಿದೆ.

ರೂಪದರ್ಶಿ ಮಾನ್ಸಿಯನ್ನು ಹತ್ಯೆಗೈದ ಸಯ್ಯದ್ ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ. ಬಳಿಕ ಓಲಾ ಕ್ಯಾಬ್ ಬುಕ್ ಮಾಡಿದ್ದ.
ಕ್ಯಾಬ್ ಬರುತ್ತಲೇ ಲಗೇಜ್ ಇದೆ ಎಂದು ಹೇಳಿ ಡಿಕ್ಕಿಯಲ್ಲಿ ಲಗೇಜ್ ತುಂಬಿದ್ದ. ಭಾರವಾಗಿದ್ದ ಸೂಟ್‌ಕೇಸ್ ನೋಡುತ್ತಲೇ ಓಲಾ ಚಾಲಕನಿಗೆ ಸಂಶಯ ಬಂದಿತ್ತು. ಜತೆಗೆ ಸಯ್ಯದ್ ವರ್ತನೆಯೂ ವಿಚಿತ್ರವಾಗಿತ್ತು. ಅಲ್ಲದೆ ಕ್ಯಾಬ್ ಏರಿದ ಬಳಿಕ ಮೂರು ಬಾರಿ ಸಯ್ಯದ್ ಡ್ರಾಪ್ ಸ್ಥಳವನ್ನು ಬದಲಾಯಿಸಿದ್ದ.

ಕೊನೆಗೆ ಮಲಾಡ್‌ ಬಳಿಯ ಮೈಂಡ್‌ಸ್ಪೇಸ್‌ಗೆ ಡ್ರಾಪ್ ಹಾಕಿಸಿಕೊಂಡಿದ್ದ. ಅಲ್ಲಿ ಬ್ಯಾಗ್ ಎಸೆದು ಹೋಗಿದ್ದ. ಇದರಿಂದ ಸಂಶಯಗೊಂಡ ಓಲಾ ಚಾಲಕ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿ ತಿಳಿಸಿದ್ದ. ಬಳಿಕ ಸಿಸಿಟಿವಿ ಆಧರಿಸಿ ಸಯ್ಯದ್‌ನನ್ನು ನಾಲ್ಕು ಗಂಟೆಯೊಳಗೆ ಬಂಧಿಸಿದ್ದರು.

ಸಯ್ಯದ್ ಪಶ್ಚಿಮ ಅಂಧೇರಿಯ ಮಿಲಾತ್ ನಗರ್‌ನ ಅಲ್ ಒಹಾದ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದ. ಪೊಲೀಸರು ಅಲ್ಲಿಗೆ ಪ್ರವೇಶಿಸುವ ವೇಳೆ ಸಯ್ಯದ್ ರಕ್ತಸಿಕ್ತ ಬೆಡ್‌ಶೀಟ್ ಹಾಗು ಇತರ ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದ ಎನ್ನಲಾಗಿದೆ.

Comments are closed.