ರಾಷ್ಟ್ರೀಯ

ಗುಲಾಂ ನಬಿ ಆಜಾದ್ ಹೇಳಿಕೆ ಹಿಂದುಗಳ ಬಗ್ಗೆ ಕೆಟ್ಟ ಭಾವನೆ ಮೂಡಿಸುವಂತಿದೆ: ಬಿಜೆಪಿ ಆರೋಪ

Pinterest LinkedIn Tumblr


ಹೊಸದಿಲ್ಲಿ: ಹಿಂದು ಅಭ್ಯರ್ಥಿಗಳು ತನ್ನನ್ನು ಇತ್ತೀಚಿಗೆ ಕಾರ್ಯಕ್ರಮಗಳಿಗೆ ಕರೆಯುತ್ತಿಲ್ಲ, ಪ್ರಚಾರ ಕಾರ್ಯಗಳಿಗೆ ನನಗೆ ಅವರಿಂದ ಆಹ್ವಾನ ಕಡಿಮೆಯಾಗಿದೆ ಎಂದಿರುವ ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಗುಲಾಂ ಹೇಳಿಕೆ ದ್ವಂದ್ವದಿಂದ ಕೂಡಿದೆ. ಅದು ಹಿಂದುಗಳ ಬಗ್ಗೆ ಕೆಟ್ಟ ಭಾವನೆ ಮೂಡಿಸುವಂತಿದೆ, ಹೀಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬುಧವಾರ ಲಖನೌದ ಅಲಿಘಡ್‌ ಮುಸ್ಲಿಂ ಯುನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಗುಲಾಂ ನಬಿ ಆಜಾದ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುವ ಜತೆಗೆ ಹಿಂದು ಅಭ್ಯರ್ಥಿಗಳ ಬಗ್ಗೆ ಹೇಳಿಕೆ ನೀಡಿದ್ದರು.

ಗುಲಾಂ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್‌ ಮತಗಳಿಕೆ ಕುಸಿಯುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಜನಪ್ರಿಯತೆ ಇಲ್ಲವಾಗಿದೆ, ಹೀಗಾಗಿ ಆಜಾದ್‌ರನ್ನು ಯಾರೂ ಭಾಷಣಕ್ಕೆ ಕರೆಯುತ್ತಿಲ್ಲ. ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳುವುದು ಬಿಟ್ಟು, ಹಿಂದು-ಮುಸ್ಲಿಂ ಬಗ್ಗೆ ಮಾತನಾಡುತ್ತಿದ್ದಾರೆ.

ದುಗಳ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದನ್ನು ಗುಲಾಂ ನಿಲ್ಲಿಸಬೇಕು. ಹಿಂದುಗಳ ಬಗ್ಗೆ ಕಾಂಗ್ರೆಸ್ ನಾಯಕರಿಗಿರುವ ಧೋರಣೆಯನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.

Comments are closed.