ರಾಷ್ಟ್ರೀಯ

ಕಾನೂನು ವಿದ್ಯಾರ್ಥಿಗಳಿಂದ ಕಿರಣ್ ಬೇಡಿಗೆ ದಿಗ್ಬಂಧನ

Pinterest LinkedIn Tumblr


ಹೊಸದಿಲ್ಲಿ: ಪುದುಚೇರಿಯ ಡಾ. ಬಿ. ಆರ್. ಅಂಬೇಡ್ಕರ್ ಸರಕಾರಿ ಕಾನೂನು ವಿದ್ಯಾಲಯಕ್ಕೆ ಬುಧವಾರ ಭೇಟಿ ನೀಡಿದ್ದ ಪುದುಚೇರಿ ಲೆ. ಗವರ್ನರ್ ಕಿರಣ್ ಬೇಡಿ ಅವರಿಗೆ ಅಲ್ಲಿನ ವಿದ್ಯಾಥಿಗಳು ದಿಗ್ಬಂಧನ ವಿಧಿಸಿದ್ದಾರೆ.

ಆಡಳಿತ ಅವ್ಯವಸ್ಥೆ ಕುರಿತು ದೂರು ಬಂದಿದ್ದರಿಂದ ಅದನ್ನು ಪರಿಶೀಲಿಸಲು ಲೆ. ಗ. ಬೇಡಿ ಅವರು ಕಾಲೇಜಿಗೆ ತೆರಳಿದ್ದರು. ಕ್ಯಾಂಪಸ್‌ ಭೇಟಿಯ ಬಳಿಕ ತೆರಳಲು ಅನುವಾಗುತ್ತಿದ್ದಂತೆ ವಿದ್ಯಾರ್ಥಿಗಳು ಹೊರಹೋಗುವ ಗೇಟನ್ನು ಮುಚ್ಚಿ ಅಲ್ಲಿಂದ ತೆರಳಲು ಅಡ್ಡಿಪಡಿಸಿದ್ದಾರೆ.

ಲೆ. ಗ. ಬೇಡಿಯವರು ನಮ್ಮ ಬೇಡಿಕೆ ಈಡೇರಿಸಲು ವಿಫಲರಾಗಿದ್ದಾರೆ. ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಲು ಬಯಸಿದ್ದರೂ, ಅದಕ್ಕೆ ಅವಕಾಶ ದೊರೆತಿಲ್ಲ. ಸಮಸ್ಯೆಯನ್ನೂ ಸರಿಯಾಗಿ ಗಮನಿಸಿಲ್ಲ. ಹೀಗಾಗಿ ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಡಲು ಹೊರಗೆ ಹೋಗದಂತೆ ತಡೆಯಲಾಯಿತು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಆದರೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಲಾಗಿದೆ. ಅವರ ಅಹವಾಲು ಕೇಳಿದ ಬಳಿಕವೇ ಅಲ್ಲಿಂದ ಹೊರಟಿದ್ದೆ. ಆದರೆ ಹೊರಗೆ ಹೋಗಲು ಅಡ್ಡಿಪಡಿಸಿದ್ದಾರೆ ಎಂದು ಲೆ. ಗ. ಕಚೇರಿ ಹೇಳಿದೆ.

Comments are closed.