ಮನೋರಂಜನೆ

#MeToo: ಅವರ ಜತೆ ಮಲಗಲು ನಿರಾಕರಿಸಿದ್ದಕ್ಕೆ ನನ್ನನ್ನು ಚಿತ್ರದಿಂದ ಕೈಬಿಟ್ಟರು’

Pinterest LinkedIn Tumblr


ಮುಂಬೈ: ‘ಅವರ ಜತೆ ಮಲಗಲು ನಿರಾಕರಿಸಿದ್ದಕ್ಕೆ ನನ್ನನ್ನು ಚಿತ್ರದಿಂದ ಕೈಬಿಟ್ಟರು’ ಎಂದು ಅನಾಮಿಕ ಟ್ವಿಟರ್​ ಬಳಕೆದಾರರೊಬ್ಬರು #MeToo ಅಭಿಯಾನದಲ್ಲಿ ಟಿ-ಸೀರೀಸ್​ ಮುಖ್ಯಸ್ಥ ಭೂಷಣ್​ ಕುಮಾರ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ #MeToo ಅಭಿಯಾನದ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಿದ್ದು ಇದಕ್ಕೆ ಬಾಲಿವುಡ್​ ಗಾಯಕಿಯೊಬ್ಬರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅನಾಮಿಕ ಖಾತೆಯೊಂದರ ಮೂಲಕ ತನ್ನ ನೋವನ್ನು ಹಂಚಿಕೊಂಡಿದ್ದಾರೆ.

ತನ್ನ ಸಾಮರ್ಥ್ಯವನ್ನು ಅರಿತಿದ್ದ ಭೂಷಣ್ ಮೂರು ಚಿತ್ರಗಳಿಗೆ ಹಾಡುವ ಆಫರ್​ ಕೊಟ್ಟಿದ್ದರು. ಚಿತ್ರಗಳಿಗೆ ಸಹಿ ಹಾಕವಂತೆಯೂ ತಿಳಿಸಿದ್ದರು. ಆದರೆ ಕೆಲ ದಿನಗಳ ನಂತರ ವರ್ಸೋವಾದಲ್ಲಿರುವ ಅವರ ನಿವಾಸಕ್ಕೆ ಕರೆದರು. ನಾನು ಅದನ್ನು ನಿರಾಕರಿಸಿದ್ದೆ. ಕೆಲಸ ಮತ್ತು ಸುಖ ಎರಡನ್ನೂ ಫುಲ್​ಫಿಲ್​ ಮಾಡುವಂತಹ ಸಂಬಂಧವನ್ನು ನನ್ನಿಂದ ಬಯಸಿದ್ದ ಭೂಷಣ್​, ಪದೇ ಪದೇ ಈ ವಿಷಯದ ಕುರಿತು ನನ್ನೊಂದಿಗೆ ಪ್ರಸ್ತಾಪಿಸಿದ್ದರು. ಆದರೆ ನಾನು ಇದನ್ನು ಒಪ್ಪದಿದ್ದಾಗ, ‘ಅವರ ಜತೆ ಮಲಗದಿದ್ದಕ್ಕೆ ನಿಮ್ಮನ್ನು ಚಿತ್ರದಿಂದ ಕೈಬಿಡಲಾಗಿದೆ’ ಎಂಬ ವಿಷಯ ತಿಳಿದು ಬಂತು. ಹಾಗೇ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನನ್ನ ಕರಿಯರ್​ನ್ನು ಸರ್ವನಾಶ ಮಾಡುವ ಬೆದರಿಕೆಯೂ ಹಾಕಿದರು ಎಂದು ವಿವರಿಸಿದ್ದಾರೆ.

This is my #metoo about #tseries head honcho #bhushankumar. @MasalaBai @spotboye @mumbaimirror
I have to use a pseudonym for my own safety and anonymity pic.twitter.com/vkzoiZxkpS

— #YouTooBollywood (@YouTooBollywood) October 12, 2018

ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಭೂಷಣ್, ನನಗೆ ಅಪಖ್ಯಾತಿ ತರಲು ಈ ರೀತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಹಾಗಾಗಿ ಅನಾಮಧೇಯ ಅಕೌಂಟ್​ನಿಂದ ನನ್ನನ್ನು #MeTooಗೆ ಎಳೆದು ತಂದಿದ್ದಾರೆ. ನಾನು ಸದಾ ವೃತ್ತಿಪರತೆಯನ್ನು ಉಳಿಸಿಕೊಂಡು ಬಂದಿದ್ದೇನೆ ಎಂದು ತಮ್ಮ ವಿರುದ್ಧ ಆರೋಪವನ್ನು ಅಲ್ಲಗಳೆದಿದ್ದಾರೆ.

ಈ ಆರೋಪವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ಮುಂಬೈ ಸೈಬರ್​ ಪೊಲೀಸರ ಬಳಿ ದೂರು ದಾಖಲಿಸುತ್ತೇನೆ, ಈ ಆರೋಪ ಮಾಡಿರುವುದು ಯಾರು ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಬಾಲಿವುಡ್​ನ ವಿಕಾಸ್​ ಬಹಲ್​, ಸುಭಾಷ್​​ ಘಾಯ್​, ನಾನಾ ಪಾಟೇಕರ್​, ಅಲೋಕ್​ ನಾಥ್​ ಮತ್ತು ಸಾಜಿದ್​ ಖಾನ್​ #MeToo ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ.

Comments are closed.