ನಾಗ್ಪುರ: ಮುಂಬೈ ನಲ್ಲಿರುವ ಉತ್ತರ ಭಾರತೀಯರು ಕೆಲಸ ಮಾಡದೇ ಇರಲು ನಿರ್ಧರಿಸಿದರೆ ಮುಂಬೈ ನಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.
ಯಾವುದೇ ರಾಜಕೀಯ ಪಕ್ಷ, ವ್ಯಕ್ತಿಗಳ ಹೆಸರನ್ನೂ ಹೇಳದೇ ಸಂಜಯ್ ನಿರುಪಮ್ ಈ ಹೇಳಿಕೆ ನೀಡಿದ್ದು, ಉತ್ತರ ಭಾರತೀಯರು ಇಂತಹ ನಿರ್ಧಾರ ಕೈಗೊಳ್ಳುವಂತೆ ಮಾಡಬಾರದು ಎಂದು ಎಚ್ಚರಿಸಿದ್ದಾರೆ.
ಮುಂಬೈ ಹಾಗೂ ಮಹಾರಾಷ್ಟ್ರದೆಡೆಗೆ ಉತ್ತರ ಭಾರತ ಸಮುದಾಯ ಕೃತಜ್ಞತೆ ಹೊಂದಿದ್ದಾರೆ. ಮುಂಬೈ ನ ಹೊರೆಯನ್ನು ಹೊತ್ತಿರುವವರು ಉತ್ತರ ಭಾರತದ ಸಮುದಾಯ ಎಂದು ಉತ್ತರ ಭಾರತೀಯರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಸಂಜಯ್ ನಿರುಪಮ್ ಹೇಳಿದ್ದಾರೆ.
ಮುಂಬೈ ನಲ್ಲಿ ಉತ್ತರ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಮಾರಾಟ, ನ್ಯೂಸ್ ಪೇಪರ್ ಮಾರಾಟ, ತರಕಾರಿಗಳನ್ನು ಮಾರುವವರಾಗಿದ್ದು, ಅವರು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಮುಂಬೈ ನಗರ ಸ್ಥಗಿತಗೊಳ್ಳಲಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.
ಮುಂಬೈ
Comments are closed.