ಮುಂಬೈ

ಟಾಯ್ಲೆಟ್‌ನಲ್ಲಿ ಬಿದ್ದ ಫೋನ್‌ ತೆಗೆದುಕೊಳ್ಳಲು ಹೋಗಿ ಕೈ ಸಿಕ್ಕಿಸಿಕೊಂಡ!

Pinterest LinkedIn Tumblr


ಮುಂಬಯಿ: ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿಯೊಬ್ಬ ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸಲು ಹೋಗಿ ಅದು ಟಾಯ್ಲೆಟ್‌ನೊಳಗೆ ಬಿದ್ದಿದೆ. ಈ ಹಿನ್ನೆಲೆ ಫೋನ್ ತೆಗೆದುಕೊಳ್ಳಲು ಟಾಯ್ಲೆಟ್‌ನೊಳಗೆ ಕೈ ಹಾಕಿ ತನ್ನ ಕೈಯನ್ನು ಸಿಕ್ಕಿಹಾಕಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬಯಿ ಬಳಿಯ ಕುರ್ಲಾದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಜಂಗಢದ 19 ವರ್ಷ ವಯಸ್ಸಿನ ರೋಹಿತ್ ರಾಜಭರ್, ಇತ್ತೀಚೆಗಷ್ಟೇ 12ನೇ ತರಗತಿಯ ಪರೀಕ್ಷೆಯನ್ನು ಬರೆದು ಪಾಸ್ ಆಗಿದ್ದ. ಬಳಿಕ ಮಹಾರಾಷ್ಟ್ರದ ಕುರ್ಲಾದಲ್ಲಿರುವ ತನ್ನ ಅಂಕಲ್ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಯುವಕನ ಚಿಕ್ಕಪ್ಪ ಲಾಲ್‌ಮನಿ ತ್ರಿಮೂರತ್‌ ವರ್ಮಾ ಅಪಾರ್ಟ್‌ಮೆಂಟ್‌ನ ಶೌಚಾಲಯಕ್ಕೆ ಹೋದಾಗ ರೋಹಿತ್ ಮೊಬೈಲ್ ಬಳಕೆ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಕಮೋಡ್‌ನೊಳಗೆ ಮೊಬೈಲ್ ಫೋನ್ ಬಿದ್ದಿದ್ದು ಇದನ್ನು ತೆಗೆದುಕೊಳ್ಳಲು ಹೋಗಿ ಆತನ ಕೈಯಲ್ಲಿದ್ದ ಕಬ್ಬಿಣದ ಖಡ್ಗ ಸಿಲುಕಿಕೊಂಡು ಕೈ ಪೂರ್ತಿ ಸಿಕ್ಕಿಹಾಕಿಕೊಂಡಿದೆ. ನಂತರ ಸಹಾಯಕ್ಕಾಗಿ ಮನೆಯಲ್ಲಿದ್ದ ಇತರರನ್ನು ಸಹಾಯಕ್ಕಾಗಿ ಬೇಡಿದ್ದಾನೆ. ನಂತರ ನೆರೆ ಮನೆಯವರು ಸಹ ಈತನ ಸಹಾಯಕ್ಕಾಗಿ ಬಂದಿದ್ದು, ಕೈ ತೆಗೆಯಲು ಸಾಧ್ಯವಾಗಲಿಲ್ಲ ಎಂದು ಅಗ್ನಿಶಾಮಕ ವಾಹನ ಕರೆಸಿ ಕಮೋಡ್ ಅನ್ನು ಒಡೆಸಿದ್ದಾರೆ.

ವಿದ್ಯಾರ್ಥಿಯನ್ನು ರಕ್ಷಿಸಿದ ಬಳಿಕ ವಿನೋಬಾ ಭಾವೆ ನಗರದ ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ವಾಹನವನ್ನು ನೋಡಿ ದುರ್ಘಟನೆಯಾಗಿರಬಹುದೆಂದು ಬಂದೆವು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರು ಹಾಗೂ ಅಗ್ನಿಶಾಮಕ ವಾಹನ ಸಿಬ್ಬಂದಿ ಈತನನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಎಕ್ಸ್ ರೇ ತೆಗೆಸಿದ್ದು, ಕೈ ನೋವಿಗೆ ಔಷಧ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ, ಯುವಕನ ಬಳಿಯಿದ್ದ 14 ಸಾವಿರ ಮೌಲ್ಯದ ಹುವಾಯಿ ಸ್ಮಾರ್ಟ್‌ಫೋನ್ ಟಾಯ್ಲೆಟ್‌ನಿಂದ ಡ್ರೈನೇಜ್‌ಗೆ ಬಿದ್ದು ಹೋಗಿದ್ದು ಮೊಬೈಲ್ ಫೋನ್ ರಕ್ಷಿಸಲು ಸಾಧ್ಯವಾಗಲಿಲ್ಲ.

Comments are closed.