ರಾಷ್ಟ್ರೀಯ

ಮಾನಸಿಕ ಅಸ್ವಸ್ಥೆ ಮೇಲೆ  ಮಕ್ಕಳ ಕಳ್ಳಿ ಎಂದು ಭೀಕರ ಹಲ್ಲೆ!

Pinterest LinkedIn Tumblr


ಕೋಲ್ಕತ್ತಾ: ದೇಶಾದ್ಯಾಂತ ಮಕ್ಕಳ ಕಳ್ಳತನ ವದಂತಿ ಬಲಿಯಾಗುತ್ತಿರುವ ಮತ್ತು ಹಲ್ಲೆಯಾಗುತ್ತಿರುವ ಕುರಿತು ನಿತ್ಯ ವರದಿಯಾಗುತ್ತಲೇ ಇದೆ. ಪ್ರತಿ ಬಾರಿಯೂ ಹಲ್ಲೆಗೆ ಒಳಗಾದವರು ನಿರಪರಾಧಿಗಳು ಎಂದು ಸಾಬೀತಾಗುತ್ತಲೇ ಇದೆ.

ಮೊನ್ನೆ ತಾನೆ ಬೀದರ್‌ನಲ್ಲಿ ಮಕ್ಕಳ ಕಳ್ಳ ಎಂದು ಒಬ್ಬ ವ್ಯಕ್ತಿಯನ್ನು ಹೊಡೆದು ಸಾಯಿಸಲಾಯಿತು. ಇದೀಗ ಮಕ್ಕಳ ಕಳ್ಳಿ ಎಂದು ತಿಳಿದು ಮಾನಸಿಕ ಅಸ್ವಸ್ಥ ಮಾನಸಿಕ ಅಸ್ವಸ್ಥೆ ಮೇಲೆ ಹಲ್ಲೆ ಮಾಡಿರುವ ಘಟನೆ ಪಶ್ಚಿಮಬಂಗಾಳದ ಜಲ್‌ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ಕೆಲ ದಿನಗಳಿಂದ ಈ ಮಹಿಳೆ ಕೈಯಲ್ಲಿ ಚಾಕೋಲೇಟ್ ಹಿಡಿದುಕೊಂಡು ಓಡಾಡುತ್ತಿದ್ದರು. ಹೀಗಾಗಿ ಅನುಮಾನಗೊಂಡು ಸ್ಥಳೀಯರು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮಾನಸಿಕ ಅಸ್ವಸ್ಥೆ ಮಾಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಹಲವು ದಿನಗಳಿಂದ ಕೈಯಲ್ಲಿ ಚಾಕೋಲೆಟ್ ಮತ್ತು ಇತರ ತಿನಿಸುಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಹೀಗಾಗಿ ಮಹಿಳೆ ಮಕ್ಕಳ ಕಳ್ಳಿ ಇರಬಹುದು ಎಂದು ಹೂಹಿಸಿ ಜನರು ಥಳಿಸಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತಂತೆ ಪ್ರಕರಂ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಲ್‌ಪೈಗುರಿ ಎಸ್‌ಪಿ ಅಮಿತಾವ ಮೈತ್ಯ ಹೇಳಿದ್ದಾರೆ.

Comments are closed.