ಮುಂಬೈ

ಮಹಾರಾಷ್ಟ್ರ ರೈತರಿಗೆ ಸಿಕ್ಕ ಬೆಳೆ ವಿಮೆ ಪರಿಹಾರದ ಹಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ…!

Pinterest LinkedIn Tumblr

ಮುಂಬಯಿ: ಮಹಾರಾಷ್ಟ್ರದ ತೆಶಿಲ್ ನ ರೈತರು ತಾವು ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದು ಅದಕ್ಕೆ ಪರಿಹಾರ ಹಣವಾಗಿ ಕೇವಲ 1 ರು ಮತ್ತು 5 ರು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ಬೆಳೆ ನಷ್ಠಕ್ಕಾಗಿ 773 ರೈತರು 1 ರು ಹಾಗೂ 669 ರೈತರಿಗೆ 2 ರುಪಾಯಿ ಮತ್ತು 50 ರೈತರಿಗೆ 3 ರುಪಾಯಿ, 702 ರೈತರಿಗೆ 4 ರು ಹಾಗೂ 39 ರೈತರು 5 ರುಪಾಯಿ ಬೆಳೆ ವಿಮೆ ಪಡೆದಿದ್ದಾರೆ.

ಬಿಜೆಪಿ ಆಡಳಿತವಿರುವ ಮಹಾರಾಷ್ಚ್ರದಲ್ಲಿ ಬೆಳಎ ವಿಮೆ ಪರಿಹಾರಕ್ಕಾಗಿ ತೆಶಿಲ್ ಜಿಲ್ಲೆಯಿಂದ ಹೆಚ್ಚಿನ ಅರ್ಜಿಗಳು ಬಂದಿದ್ದವು.

ಬೀಡ್ ಜಿಲ್ಲೆಯ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಫಲಾನುಭಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರೈತರ ಹೆಸರು ಮತ್ತು ಅವರು ಪಡೆದಿರು ಪರಿಹಾರದ ಹಣದ ಮೊತ್ತವನ್ನು ಪ್ರಕಟಿಸಿದೆ.

ಬೀಡ್ ಮತ್ತು ತೆಶಿಲ್ ಜಿಲ್ಲೆಯ ಸುಮಾರು 2000ಕ್ಕೂ ಹೆಚ್ಚು ರೈತರು ಈ ಬೆಳೆ ವಿಮೆ ಪರಿಹಾರ ಪಡೆದುಕೊಂಡಿದ್ದಾರೆ. ಪರಿಹಾರ ಹಣವನ್ನು ರೈತರ ಬ್ಯಾಂಕ್ ಅಕೌಂಟ್ ಗೆ ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಿಂದ ಕೇಂದ್ರದ ಬೆಳೆ ಪರಿಹಾರ ವಿಮಾ ಯೋಜನೆಗಾಗಿ ತೆಶಿಲ್ ನ 15.691 ರೈತರು, ಬೆಳೆ ವಿಮೆ ಪರಿಹಾರಕ್ಕಾಗಿ ಒಟ್ಟು 51.42 ಲಕ್ಷ ರು, ಕೊಟ್ಟು ವಿಮೆ ಖರಿಸಿದಿದ್ದರು.

Comments are closed.