ಅಂತರಾಷ್ಟ್ರೀಯ

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರ ರಕ್ಷಣೆ: ಕಾರ್ಯಾಚರಣೆಯಲ್ಲಿ ಭಾರತ ಪಾತ್ರಕ್ಕೆ ಮೆಚ್ಚುಗೆ !

Pinterest LinkedIn Tumblr

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಇಡೀ ಜಗತ್ತೆ ಕೊಂಡಾಡುತ್ತಿದೆ.

ಇನ್ನು ಈ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರವೂ ಸಹ ಹೆಚ್ಚಿದೆ. ಹೌದು ಥಾಯ್ಲೆಂಡ್ ಸರ್ಕಾರದ ಮನವಿ ಮೇರೆಗೆ ಮಹಾರಾಷ್ಟ್ರದ ಮೀರಜ್ ನ ಎಂಜಿನಿಯರ್ ಪ್ರಸಾದ್ ಕುಲಕರ್ಣಿ ನೇತೃತ್ವದಲ್ಲಿ ಕಿರ್ಲೊಸ್ಕರ್ ಫ್ಲಡ್ ಪಂಪ್ ಟೀಂ ಕಾರ್ಯಾಚರಣೆಯಲ್ಲಿ ಮಹತ್ವದ ಕಾರ್ಯವನ್ನು ನಿಭಾಯಿಸಿದೆ.

ಕಿರ್ಲೊಸ್ಕರ್ ಫ್ಲಡ್ ಪಂಪ್ ತಂಡದ ಪರಿಣಿತಿ ಕುರಿತಂತೆ ಥಾಯ್ ಅಧಿಕಾರಿಗಳಿಗೆ ಭಾರತೀಯ ರಾಯಭಾರಿ ಅಧಿಕಾರಿಗಳು ತಿಳಿಸಿತು. ತಕ್ಷಣ ಥಾಯ್ ಸರ್ಕಾರ ಅವರನ್ನು ಕಳುಹಿಸಿಕೊಡುವಂತೆ ಕೋರಿತು. ಅಂತೆ ಭಾರತ ಸರ್ಕಾರ ಈ ನಿಪುಣ ತಂಡವನ್ನು ಥಾಯ್ಲೆಂಡ್ ಗೆ ಕಳುಹಿಸಿತು. ಈ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಈ ತಂಡ ತಂತ್ರಜ್ಞಾನದ ಮಾಹಿತಿ, ಸಲಹೆ ಮತ್ತು ಪಂಪ್ ಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದ್ದಲ್ಲದೇ ನೀರನ್ನು ಹೊರತೆಗೆಯುವಲ್ಲಿ ಮಹತ್ವದ ಪಾತ್ರವಹಿಸಿದೆ.

ಈ ಕಾರ್ಯಾಚರಣೆಯಲ್ಲಿ ತಂಡವು ವಿಶಿಷ್ಟ ಉನ್ನತ ಸಾಮರ್ಥ್ಯದ ಆಟೋಮೇಟಿಕ್ ಪ್ರೈಮ್ ಡಿವರೇಟಿಂಗ್ ಪಂಪ್ ಗಳನ್ನು ಬಳಸಿಕೊಂಡಿತ್ತು. ಜೂನ್ 24ರಂದು ಈ ತಂಡ ಕಾರ್ಯಾಚರಣೆ ಕೈಗೊಂಡಿದ್ದು ಜುಲೈ 10ಕ್ಕೆ ಯಶಸ್ವಿಯಾಗಿ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು. ಒಟ್ಟಾರೆ 18 ದಿನಗಳ ನರಕಯಾತನೆಯಿಂದ ಬಾಲಕರು ಮತ್ತು ಕೋಚ್ ರನ್ನು ಸುರಕ್ಷಿತವಾಗಿ ಹೊರತರಲಾಗಿದೆ.

Comments are closed.