ಅಂತರಾಷ್ಟ್ರೀಯ

ಪ್ರಾಣದ ಹಂಗುತೊರೆದು ಗುಹೆಯೊಳಗಿದ್ದ ಬಾಲಕರನ್ನು ರಕ್ಷಿಸಿ ಹೊರಬಂದ ವೈದ್ಯನಿಗೆ ಸಿಕ್ಕಿದ ದೊಡ್ಡ ಶಾಕ್ !

Pinterest LinkedIn Tumblr

ಮಾಯ್ ಸಾಯ್: ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದ ವೈದ್ಯನ ಜೊತೆ ವಿಧಿ ಆಟವಾಡಿದೆ.

ಜಗತ್ತಿನ ಅತ್ಯಂತ ಖ್ಯಾತನಾಮ ವೈದ್ಯರ ಪೈಕಿ ಒಬ್ಬರೆನಿಸಿರುವ ಆಸ್ಟ್ರೇಲಿಯಾದ ರಿಚರ್ಡ್ ಹ್ಯಾರಿಸ್ ಗುಹೆಯೊಳಗಿದ್ದವರನ್ನು ರಕ್ಷಿಸಿ ಹೊರ ಬಂದ ತಕ್ಷಣ ಅವರಿಗೊಂದು ಬಿಗ್ ಶಾಕ್ ಕಾದಿತ್ತು.

ಪ್ರಾಣವನ್ನೇ ಪಣಕ್ಕಿಟ್ಟು ಬಾಲಕರನ್ನು ರಕ್ಷಿಸಿದ್ದ ಹ್ಯಾರಿ ಹೊರಬರುತ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ತಂದೆಯ ಸಾವಿನ ಸುದ್ದಿ. ಹೌದು ಹ್ಯಾರಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಅವರ ತಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು.

ಹ್ಯಾರಿ ವೃತ್ತಿಯ ಜೊತೆಗೆ ನೀರಿನಾಳದಲ್ಲೂ ಮುಳುಗುವ ತರಬೇತಿ ಪಡೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ನೀರಿನಲ್ಲಿ ಮುಳುಗಿ, ಅಲ್ಲಿನ ಬಂಡೆಗಲ್ಲನ್ನು ಹತ್ತಿ, ಕೆಸರಿನ ನಡುವೆ ಸಾಗಿ ಆ ಕಾರ್ಗತ್ತಲ ಗುಹೆಯೊಳಗೆ ಔಷದ ಉಪಕರಣಗಳನ್ನು ಹೊತ್ತೊಯ್ದ ಹ್ಯಾರಿ ಗುಹೆಯೊಳಗೆ ಸಿಲುಕಿದ್ದ 13 ಮಂದಿ ಆರೋಗ್ಯ ಪರೀಕ್ಷೆ ಮಾಡಿದರು. ಅವರ ಈ ಸಾಹಸವನ್ನು ವಿಶ್ವವೇ ಕೊಂಡಾಡಿತ್ತು.

Comments are closed.