ಕರಾವಳಿ

ಅರ್ಥಿಕ ಸಮಸ್ಯೆ ಇರುವ ಬಡ ರೋಗಿಗಳಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉಪಯುಕ್ತ : ತಿರುಮಲೇಶ್ವರ ಭಟ್

Pinterest LinkedIn Tumblr

ಉಳ್ಳಾಲ. ಕಲ್ಲೂರು ಎಜುಕೇಶನ್ ಟ್ರಸ್ಟ್ (ರಿ) ಕಾರವಾರ, ಶ್ರೀ ಸಾಯಿ ಸೇವಾ ಪ್ರತಿಷ್ಠಾನ (ರಿ) ದೈಗೋಳಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ವೆನ್ ಲಾಕ್ ಆಸ್ಪತ್ರೆ ಕೆ.ಎಂ.ಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವು ದೈಗೋಳಿಯ ಸಾಯಿನಿಕೇತನ ಅಶ್ರಮದಲ್ಲಿ ನಡೆಯಿತು.

ಕೊಡ್ಲಮೊಗರು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ ಸಭಾ ಕಾರ್ಯಕ್ರಮವನ್ನು ದ್ವೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಎಷ್ಟೋ ಜನರು ತನ್ನ ಕಣ್ಣಿನ ದೃಷ್ಟಿ ಕಡಿಮೆ ಇದ್ದು ಅರ್ಥಿಕ ಸಮಸ್ಯೆಯಿಂದ ವೈದ್ಯರನ್ನು ಭೇಟಿಯಾಗಲು ಭಯ ಪಡುವ ಕಾಲದಲ್ಲಿ ಇಂತಹ ನೇತ್ರ ಚಿಕಿತ್ಸಾ ಶಿಬಿರ ಬಡ ರೋಗಿಗಳಿಗೆ ಉಪಯುಕ್ತ ಎಂದು ಹೇಳಿದರು.

ಕಲ್ಲೂರು ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಹಾಜಿ ಇಬ್ರಾಹಿಂ ಹಾಜಿ ಕಲ್ಲೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಮೆಯಿಂದ ಬಂದ ಲಾಭದಿಂದ ನಮ್ಮ ಮಕ್ಕಳಿಗೆ ಸಂಪತ್ತು ಕೂಡಿಕರಿಸುದಕ್ಕಿಂತ ನಮ್ಮ ಮಕ್ಕಳನ್ನು ಸಂಪತ್ತಾಗಿ ಬೆಳೆಸಿ. ಉದ್ಯಮ ಲಾಭ ಉಳಿದ ಶೇಕಡವನ್ನು ಸಮಾಜಕ್ಕೆ ನೀಡಿದಾಗ ನಮ್ಮ ಕುಟುಂಬ ಅರಳಲುದ ಜೋತೆಗೆ ನಮ್ಮ ಪರಿಸರ ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಡಾ.ಉದಯಕುಮಾರ್ ದೈಗೋಳಿ, ವರ್ಕಾಡಿ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಪಿ.ಬಿ, ಸದಸ್ಯ ಗೋಪಾಲಕೃಷ್ಣ ಪಜ್ವ, ವಿಜಯ ಬ್ಯಾಂಕ್ ಸುಂಕದಕಟ್ಟೆ ಶಾಖಾ ಮ್ಯಾನೇಜರ್ ಜಿಜೇಶ್ ಶೇಖರ್.ಇ, ಡಾ.ಸುರೆಖಾ ಶೆಟ್ಟಿ, ಮೀಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಮುಹಮ್ಮದ್ ಕುಂಞ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಡಾ.ಉದಯಕುಮಾರ್ ದಂಪತಿ ಶಾರದರವನ್ನು ಕಲ್ಲೂರು ಎಜುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಶಿಬಿರದಲ್ಲಿ 500ಕ್ಕೊ ಅಧಿಕ ರೋಗಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.ಕಲ್ಲೂರು ಎಜುಕೇಶನ್ ಟ್ರಸ್ಟ್ (ರಿ) ಸದಸ್ಯ ಅಝೀಝ್ ಕಲ್ಲೂರು ಸ್ವಾಗತಿಸಿದರು. ದಿವಾಕರ ಎಸ್.ಜೆ ವಂದಿಸಿದರು.ಕಿಶೋರ್ ಕುಮಾರ್ ಪಾವಳ ಕಾರ್ಯಕ್ರಮ ನಿರೂಪಿಸಿದರು.

Comments are closed.