ಕರಾವಳಿ

ನಾಳೆ ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಧಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು : ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರುಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜುಲೈ 13, ಶುಕ್ರವಾರ ಬೆಳಿಗ್ಗೆ 10.30ಕ್ಕೆ ದ.ಕ. ಜಿಲ್ಲಾ ಪಂಚಾತ್‌ ಕಚೇರಿ ಕಟ್ಟಡ ಕೊಟ್ಟಾರ‌ದಲ್ಲಿರುವ ‘ನೇತ್ರಾವತಿ ಸಭಾಂಗಣ’ದಲ್ಲಿ ಕನ್ನಡ ಭಾಷಾ ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕನ್ನಡ ಸಾಧಕ ‘ಪ್ರತಿಭಾ ಪುರಸ್ಕಾರ’ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಕನ್ನಡ ಭಾಷಾ ಮಾಧ್ಯಮದಲ್ಲಿ 125ರಲ್ಲಿ 125 ಆಂಕಗಳಿಸಿರುವ ವಿದ್ಯಾರ್ಥಿಗಳಿಗೆ ,ಶೇ. 100 ಫಲಿತಾಂಶ ಪಡೆದಕನ್ನಡ ಶಾಲೆಗಳಿಗೆ ಪಿ.ಯು.ಸಿ ತರಗತಿಯಲ್ಲಿಕನ್ನಡ ಭಾಷೆಯಲ್ಲಿ ಶೇ. 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ’ಕನ್ನಡ ಸಾಧಕ ಪ್ರತಿಭಾ ಪುರಸ್ಕಾರ’ ನೀಡಿಗೌರವಿಸಲಾಗುವುದು.

ಸಮಾರಂಭವನ್ನುದ.ಕ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ. ಎಂ.ಆರ್. ರವಿ ಐ.ಎ.ಎಸ್. ಉದ್ಘಾಟಿಸಲಿರುವರು. ಪದ್ಮಶ್ರೀ ಪುರಸ್ಕೃತಖ್ಯಾತ ವೈದ್ಯ ವಿದ್ವಾಂಸಡಾ. ಬಿ.ಎಂ. ಹೆಗ್ಡೆ ಮತ್ತುಕಂಪ್ಯೂಟರ್ ಭಾಷಾ ವಿಜ್ಞಾನಿ ನಾಡೋಜ ಕೆ. ಪಿ. ರಾವ್‌ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ‌ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಪ್ರಧಾನ‌ ಅಭ್ಯಾಗತರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ‌ಉಪನಿರ್ದೇಶಕ ವೈ. ಶಿವರಾಮಯ್ಯ, ಮಹಾನಗರ ಪಾಲಿಕೆಯ‌ ಆಯುಕ್ತರಾದ ಮಹಮ್ಮದ್ ನಝೀರ್ , ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ. ಜಿಲ್ಲೆಯ‌ಉಪನಿರ್ದೇಶಕ ಎಂ ನಾಗರಾಜಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ, ಉಪಸ್ಥಿತರಿರುವರು,

ಒಟ್ಟು ಸುಮಾರು 800 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಲಿದ್ದು, 11 ವಿದ್ಯಾಸಂಸ್ಥೆಗಳನ್ನು ಅಭಿನಂದಿಸಲಾಗುವುದುಹಾಗೂ ಭಾಗವಹಿಸುವ ವಿದ್ಯಾರ್ಥಿಗಳಿಗೆಪ್ರಶಂಸಾ ಪತ್ರದೊಂದಿಗೆಕನ್ನಡ ರತ್ನಕೋಶ (ಕನ್ನಡನಿಘಂಟು) ವನ್ನು‌ ಉಡುಗೊರೆಯಾಗಿ ನೀಡುವುದಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.