ಮುಂಬೈ

ಮುಂಬಯಿ: ಮುಂದುವರಿದ ಮಳೆ; ನೀರಿನಲ್ಲಿ ಮುಳುಗಿ ಹೋದ ರೈಲು ಹಳಿಗಳು-ರೈಲು ಸೇವೆ ನಿಲುಗಡೆ

Pinterest LinkedIn Tumblr

ಮುಂಬಯಿ : ಮುಂಬಯಿ ಮಹಾನಗರಿಯಲ್ಲಿ ಇಂದು ಮಂಗಳವಾರ ಕೂಡ ಎಡೆಬಿಡದ ಮಳೆ ಮುಂದುವರಿದಿದೆ. ವಿಶ್ವ ಪ್ರಸಿದ್ಧ ಚೌಪಾಟಿಯಲ್ಲಿ ಆಳೆತ್ತರದ ಸಮುದ್ರದಲೆಗಳು ಅಪ್ಪಳಿಸುತ್ತಿರುವುದು ಭೀತಿ ಮೂಡಿಸುವಂತಿದೆ. ನಿನ್ನೆ ರಾತ್ರಿ ಪೂರ್ತಿ ಸುರಿದಿರುವ ಜಡಿಮಳೆಯಿಂದ ಮಹಾನಗರಿಯ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿವೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ ಗುರುವಾರದ ವರೆಗೂ ಜಡಿಮಳೆ ಮುಂದುವರಿಯಲಿದೆ. ನಿನ್ನೆ ರಾತ್ರಿಯಿಂದೀಚೆಗೆ ನಗರದಲ್ಲಿ 200 ಮೀಮೀ ಗೂ ಅಧಿಕ ಮಳೆಯಾಗಿರುವುದು ದಾಖಲಾಗಿದೆ.

ರೈಲು ಹಳಿಗಳು ನೀರಿನಲ್ಲಿ ಮುಳುಗಿ ಹೋಗಿವೆ. ಹಾಗಾಗಿ ರೈಲು ಓಡಾಟಗಳನ್ನು ಸುರಕ್ಷೆಗಾಗಿ ನಿಲ್ಲಿಸಲಾಗಿದೆ. ಹಾಗಿದ್ದರೂ ಚರ್ಚ್‌ಗೇಟ್‌ನಿಂದ ಬೊಲಿವಿಲಿ ವರೆಗೆ ರೈಲು ಸಂಚಾರ ಜಾರಿಯಲ್ಲಿದೆ. ಡಬ್ಟಾವಾಲಾಗಳು ಇಂದು ತಮ್ಮ ಕೆಲಸವನ್ನು ನಿಲ್ಲಿಸಿದ್ದಾರೆ.

Comments are closed.