ಕ್ರೀಡೆ

ಶ್ರೀಶಾಂತ್ ಬಾಡಿ ಬಿಲ್ಡ್ ಫೋಟೋ ….ಹರ್ಭಜನ್ ಕಾಲೆಳೆದ ಟ್ವೀಟರಿಗರು ಹೇಳಿದ್ದೇನು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಟೀಂ ಇಂಡಿಯಾದ ಮಾಜಿ ವೇಗಿ ಹಾಗೂ ನಿಷೇಧಿತ ಕ್ರಿಕೆಟಿಗ ಎಸ್ ಶ್ರೀಶಾಂತ್ ಸದ್ಯ ದೇಹವನ್ನು ಹುರಿಗೊಳಿಸಿ ಬಾಹುಬಲಿಯಂತೆ ಕಾಣುತ್ತಿದ್ದು ಅವರ ಸದ್ಯದ ಫೋಟೋವನ್ನು ಪೋಸ್ಟ್ ಮಾಡಿದ್ದು ಇದಕ್ಕೆ ಟ್ವೀಟರಿಗರು ಹಿರಿಯ ಬೌಲರ್ ಹರ್ಭಜನ್ ಸಿಂಗ್ ಅವರ ಕಾಳೆಯುತ್ತಿದ್ದಾರೆ.

ಹಿಂದೊಮ್ಮೆ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯಾವಳಿಯ ವೇಳೆ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದರು. ಆದರೆ ಈಗ ಹರ್ಭಜನ್ ಸಿಂಗ್ ಗೆ ಶ್ರೀಶಾಂತ್ ರನ್ನು ಮುಟ್ಟುವ ಧೈರ್ಯ ಬಾರದು ಎಂದು ಟ್ವೀಟರಿಗರು ಭಜ್ಜಿಯ ಕಾಳೆಯುತ್ತಿದ್ದಾರೆ.

ಸದ್ಯಕ್ಕೆ ಶ್ರೀಶಾಂತ್ ಸಿನಿಮಾ ಮತ್ತು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ 34 ವರ್ಷದ ಶ್ರೀಶಾಂತ್ ತಮ್ಮ ದೇಹವನ್ನು ಹುರಿಗೊಳಿಸಿ ಹಲ್ಕ್ ರೀತಿಯಲ್ಲಿ ತಯಾರಾಗಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅನೇಕರು ಹರ್ಭಜನ್ ಗೆ ಟಾಂಗ್ ನೀಡಿದ್ದಾರೆ.

ಈಗ ಶ್ರೀಶಾಂತ್ ರನ್ನು ನೋಡಿ ಹರ್ಭಜನ್ ಸಿಂಗ್ ಇನ್ನೆಂದಿಗೂ ಶ್ರೀ ಜತೆ ಕ್ರಿಕೆಟ್ ಆಡಲು ಬರುವ ಯೋಚನೆಯೇ ಮಾಡುವುದಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ. ಈಗ ಶ್ರೀಶಾಂತ್ ಕೈಗೆ ಹರ್ಭಜನ್ ಸಿಂಗ್ ಸಿಗಬೇಕಿತ್ತು, ಶ್ರೀಶಾಂತ್ ನೋಡಲು ಹಳೆ ಹಿಂದಿ ಸಿನಿಮಾ ಸೂರ್ಯವಂಶಿಯ ಸಲ್ಮಾನ್ ಖಾನ್ ರಂತೆ ಕಾಣಿಸುತ್ತಿದ್ದಾರೆ.

ಕೆಂಪೇಗೌಡ 2 ಕನ್ನಡ ಚಿತ್ರಕ್ಕಾಗಿ ಶ್ರೀಶಾಂತ್ ಈ ರೀತಿ ಜಿಮ್ ವರ್ಕ್ ಔಟ್ ಮಾಡುತ್ತಿದ್ದು ಸದ್ಯದಲ್ಲೇ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸಿದ್ಧತೆಯಲ್ಲೂ ಇದ್ದಾರೆ ಎನ್ನಲಾಗಿದೆ.

Comments are closed.