ಮುಂಬೈ

Rape ಪ್ರತಿಭಟನೆ ಮೆರವಣಿಗೆಯಲ್ಲೇ ಲೈಂಗಿಕ ಕಿರುಕುಳ; arrest

Pinterest LinkedIn Tumblr


ಮುಂಬಯಿ : ಉನ್ನಾವೋ ಮತ್ತು ಕಥುವಾ ರೇಪ್‌ ಪ್ರಕರಣಗಳನ್ನು ವಿರೋಧಿಸಿ ಮುಂಬಯಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಾಮುಕನೊಬ್ಬ ಮಹಿಳೆಯೊಬ್ಬರನ್ನು ಅಟ್ಟಾಡಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬಯಿಯ ಕಾರ್ಟರ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಕಾಮುಕನು ಮಹಿಳೆಯನ್ನು ದುರುಗುಟ್ಟಿ ಅಶ್ಲೀಲ ಸಂಜ್ಞೆಗಳನ್ನು ಮಾಡಿದ್ದಲ್ಲದೆ ಆಕೆಯನ್ನು ಬೆನ್ನಟ್ಟಿ ಲೈಂಗಿಕ ಕಿರುಕುಳ ನೀಡಿದಾಗ ಮಹಿಳೆಯು ಆತನಿಂದ ಅದೃಷ್ಟವಶಾತ್‌ ತಪ್ಪಿಸಿಕೊಂಡು ಪಾರಾಗುವಲ್ಲಿ ಯಶಸ್ವಿಯಾದಳು ಎಂದು ವರದಿಗಳು ತಿಳಿಸಿವೆ.

ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಕಾಮುಕನನ್ನು ರಾಜು ಜಾಧವ್‌ ಎಂದು ಗುರುತಿಸಲಾಗಿದ್ದು ಈತನು ಕೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ವ್ಯಕ್ತಿ ಎಂದು ತನಿಖೆಯಿಂದ ಗೊತ್ತಾಗಿದೆ.

ಮುಂಬಯಿಯ ಬಾಂದ್ರಾ ಮತ್ತು ಜುಹುವಿನಲ್ಲಿ ನಿನ್ನೆ ಭಾನುವಾರ ಜಮ್ಮು ಕಾಶ್ಮೀರದ ಕಥವಾ ರೇಪ್‌ ಆ್ಯಂಡ್‌ ಮರ್ಡರ್‌ ಮತ್ತು ಉನ್ನಾವೋ ಗ್ಯಾಂಗ್‌ ರೇಪ್‌ ಪ್ರಕರಣಗಳನ್ನು ವಿರೋಧಿಸಿ ಭಾರೀ ದೊಡ್ಡ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗಿತ್ತು. ಬಾಂದ್ರಾದಲ್ಲಿನ ಪ್ರತಿಭಟನಾ ಮೆರವಣಿಗೆಯನ್ನು ಆಮ್‌ ಆದ್ಮಿ ಪಕ್ಷ ಸಂಯೋಜಿಸಿತ್ತಾದರರೆ ಜುಹು ಬೀಚ್‌ನಲ್ಲಿನ ಕ್ಯಾಂಡಲ್‌ ಲೈಟ್‌ ಜಾಥಾವನ್ನು ಕಾಂಗ್ರೆಸ್‌ ಪಕ್ಷ ಸಂಘಟಿಸಿತ್ತು.

ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದಿಲ್ಲಿಯಲ್ಲಿ ಕಥುವಾ – ಉನ್ನಾವೋ ಪ್ರಕರಣಗಳ ವಿರುದ್ಧ ಮಧ್ಯರಾತ್ರಿಯ ಕ್ಯಾಂಡಲ್‌ ಲೈಟ್‌ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಸಂದರ್ಭದಲ್ಲಿ ರಾಹುಲ್‌ ಸಹೋದರಿ ಪ್ರಿಯಾಂಕಾ ವಾದ್ರಾ ವಿರುದ್ಧ ತಳ್ಳಾಟ ನಡೆದಿತ್ತು.

ಕಿಕ್ಕಿರಿದ ಜನಸಮೂಹದಲ್ಲಿ ಲೈಂಗಿಕ ಉದ್ದೇಶದಿಂದ ಮಹಿಳೆಯರನ್ನು ತಳ್ಳಾಡುವ ಧೂರ್ತರು ಎಲ್ಲೆಡೆ ಸಾಮಾನ್ಯವಾಗಿ ದುಷ್ಕೃತ್ಯದಲ್ಲಿ ತೊಡಗಿರುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ರೇಪ್‌ ವಿರೋಧಿಸಿ ನಡೆಸುವ ಪ್ರತಿಭಟನೆಯಲ್ಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುವುದು ವಿಪರ್ಯಾಸದ ಸತ್ಯಸಂಗತಿಯಾಗಿರುವುದು ದುರದೃಷ್ಟಕರ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

-ಉದಯವಾಣಿ

Comments are closed.