ರಾಷ್ಟ್ರೀಯ

ಎಂಜಿನ್‌ ಇಲ್ಲದೇ ಓಡಿತು ಮತ್ತೊಂದು ರೈಲು!

Pinterest LinkedIn Tumblr


ಬಾಲಸೋರ್‌ (ಒಡಿಶಾ): ಎಂಜಿನ್‌ ಇಲ್ಲದೇ ಅಹಮದಾಬಾದ್‌-ಪುರಿ ಎಕ್ಸ್‌ಪ್ರೆಸ್‌ ರೈಲು 10 ಕಿ.ಮೀ ಚಲಿಸಿದ ಬೆಚ್ಚಿಬೀಳಿಸುವ ಘಟನೆ ಮಾಸುವ ಮುನ್ನವೇ ಭಾರತೀಯ ರೈಲ್ವೆ ಇಲಾಖೆ ಮತ್ತೆ ಅಂಥದ್ದೇ ಎಡವಟ್ಟು ಮಾಡಿದೆ. ಆದರೆ ಈ ಬಾರಿ ಎಂಜಿನ್‌ ಇಲ್ಲದೇ 2 ಕಿ.ಮೀ. ಚಲಿಸಿದ್ದು ಗೂಡ್ಸ್‌ ರೈಲು!

ದಾಮಾರದಿಂದ ಜೆಮ್ಸ್‌ಶೆಡ್‌ಪುರ ನಡುವೆ ಚಲಿಸುತ್ತಿದ್ದ ಸರಕು ಸಾಗಣೆ ರೈಲಿನ ಆರು ವ್ಯಾಗನ್‌ಗಳು ಎಂಜಿನ್‌ ಸಂಪರ್ಕ ಕಳೆದುಕೊಂಡು ಕಾಂತಪಾಡ ಮತ್ತು ಬಹಾನಾಗ ನಿಲ್ದಾಣದ ಮಧ್ಯೆ 2 ಕಿ.ಮೀ. ಚಲಿಸಿದೆ. ರೈಲು, ಹಳಿ ತಪ್ಪಿ ಯಾವುದೇ ಅವಘಡ ಸಂಭವಿಸುವ ಮುನ್ನವೇ ರೈಲನ್ನು ನಿಲ್ಲಿಸಲಾಯಿತು ಎಂದು ಬಾಲಸೋರ್‌ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ದೋಷದಿಂದ ಈ ಸಮಸ್ಯೆಯಾಗಿದೆಯೇ ಹೊರತು ಮೆಕ್ಯಾನಿಕ್‌ನ ನಿರ್ಲಕ್ಷ್ಯವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.