ಮುಂಬೈ

ಆಸ್ಪತ್ರೆಗೆ ಸೇರಿದ್ದ ಇಂದ್ರಾಣಿ ಮುಖರ್ಜಿ ಗುಣಮುಖ, ಮರಳಿ ಜೈಲಿಗೆ

Pinterest LinkedIn Tumblr


ಮುಂಬಯಿ: ಓವರ್‌ ಡೋಸ್‌ ಔಷಧ ಸೇವಿಸಿ ಅಸ್ವಸ್ಥರಾಗಿ ಇಲ್ಲಿನ ಜೆಜೆ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ಶೀನಾ ಬೋರಾ ಮರ್ಡರ್‌ ಕೇಸಿನ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಗುಣಮುಖರಾಗಿರುವ ಕಾರಣ ಅವರನ್ನು ಮರಳಿ ಬೈಕುಲಾ ಜೈಲಿಗೆ ಕಳುಹಿಸಲಾಗಿದೆ.

46ರ ಹರೆಯದ ಇಂದ್ರಾಣಿ ಮುಖರ್ಜಿ ಅವರನ್ನು ಕಳೆದ ಶುಕ್ರವಾರ ಜೆಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬುಧವಾರ ಆಕೆಯ ಆರೋಗ್ಯವಾಗಿ ಗಮನಾರ್ಹವಾಗಿ ಸುಧಾರಿಸಿರುವುದನ್ನು ಪರಿಗಣಿಸಿ ಆಕೆಯನ್ನು ಮರಳಿ ಜೈಲಿಗೆ ಕಳುಹಿಸಲಾಯಿತು ಎಂದು ಮೂಲಗಳು ಹೇಳಿವೆ.

ಈ ನಡುವೆ ರಾಜ್ಯ ಬಂಧೀಖಾನೆ ಇಲಾಖೆ, ಇಂದ್ರಾಣಿ ಮುಖರ್ಜಿ ಜೈಲಿನಲ್ಲಿ ಅಸ್ವಸ್ಥರಾದದ್ದು ಹೇಗೆ ಎಂಬ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ತಿಳಿದು ಬಂದಿದೆ.

-ಉದಯವಾಣಿ

Comments are closed.