ಕ್ರೀಡೆ

ಪ್ರತಿಭಟನೆ ಫ‌ಲಶ್ರುತಿ: ಚೆನ್ನೈನಲ್ಲಿ ಈ ವರ್ಷ ಐಪಿಎಲ್‌ ಪಂದ್ಯ ಇಲ್ಲ

Pinterest LinkedIn Tumblr


ಚೆನ್ನೈ: ಐಪಿಎಲ್‌ ವಿರೋಧಿ ಪ್ರತಿಭಟನೆಗಳ ಫ‌ಲಶ್ರುತಿಯಾಗಿ ಚೆನ್ನೈನಲ್ಲಿ ಈ ವರ್ಷ ಇನ್ನು ಯಾವುದೇ ಐಪಿಎಲ್‌ ಪಂದ್ಯ ನಡೆಯುವುದಿಲ್ಲ. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂ ನಲ್ಲಿ ಈಗಿನ್ನು ನಡೆಯಲಿಕ್ಕಿರುವ ಎಲ್ಲ ಟಿ-20 ಪಂದ್ಯಗಳನ್ನು ತಮಿಳು ನಾಡು ಹೊರಗಿನ ತಾಣಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನಿನ್ನೆ ಮಂಗಳವಾರ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಕೆಕೆಆರ್‌ ಪಂದ್ಯ ನಡೆಯುತ್ತಿದ್ದಾಗ ಇಬ್ಬರು ಪ್ರತಿಭಟನಕಾರರು ಆಟಗಾರರ (ರವೀಂದ್ರ ಜಡೇಜ) ಮೇಲೆ ಚಪ್ಪಲಿ ಎಸೆದಿರುವುದಲ್ಲದೆ ರಾಜ್ಯಾದ್ಯಂತ ಐಪಿಎಲ್‌ ವಿರೋಧಿ ಪ್ರತಿಭಟನೆಗಳು ನಡೆದಿರುವುದನ್ನು ಅನುಲಕ್ಷಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಚೆನ್ನೈನಲ್ಲಿ ನಡೆಯಲಿಕ್ಕಿರುವ ಐಪಿಎಲ್‌ ಪಂದ್ಯಗಳನ್ನು ಯಾವ ತಾಣಗಳಿಗೆ ವರ್ಗಾಯಿಸಲಾಗಿದೆ ಎಂಬುದನ್ನು ವರದಿಗಳು ತಿಳಿಸಿಲ್ಲ.

ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸುವಲ್ಲಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಐಪಿಎಲ್‌ ಪಂದ್ಯಗಳನ್ನು ನಡೆಸಲಾಗುತ್ತಿದೆ ಎಂದು ತಮಿಳು ಪರ ಸಂಘಟನೆಗಳು ಆರೋಪಿಸಿವೆ. ಅಂತೆಯೇ ರಾಜ್ಯಾದ್ಯಂತ ಪ್ರತಿಭಟನೆಗೆ ಅವು ಕರೆ ನೀಡಿವೆ.

ಕಾವೇರಿ ವಿಷಯದಲ್ಲಿ ಕೇಂದ್ರ ಸರಕಾರದ ಅಲಕ್ಷ್ಯವನ್ನು ವಿರೋಧಿಸಿ ತಮಿಳು ನಾಡಿನ ಆದ್ಯಂತ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು ಹಲವು ನಗರಗಳಲ್ಲಿ ರೈಲು, ಬಸ್ಸುಗಳನ್ನು ತಡೆದಿರುವ ಘಟನೆಗಳು ವರದಿಯಾಗಿವೆ.

-ಉದಯವಾಣಿ

Comments are closed.