
ಅಲ್ಜೀರ್ಸ್: ಅಲ್ಜೀರಿಯಾದ ರಾಜಧಾನಿ ಅಲ್ಜೀರ್ಸ್ನ ಬೌಫಾರಿರ್ಕ್ ವಿಮಾನ ನಿಲ್ದಾಣದ ಬಳಿ ಮಿಲಿಟರಿ ವಿಮಾನವೊಂದು ಬುಧವಾರ ದುರಂತಕ್ಕೀಡಾಗಿದೆ.
ಘೋರ ದುರಂತದಲ್ಲಿ ಮಿಲಿಟರಿ ಸಿಬಂದಿಗಳು ಸೇರಿದಂತೆ ಕನಿಷ್ಠ 257 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇಲ್ಯೂಸಿನ್ ಐಎಲ್ 76 ಹೆಸರಿನ ವಿಮಾನದಲ್ಲಿ 250 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಹುಲ್ಲುಗಾವಲಿನಲ್ಲಿ ಪತನವಾಗಿದೆ. ವಿಮಾನದ ಬಾಲ ತಾಳೆ ಮರವೊಂದಕ್ಕೆ ಸಿಲುಕಿಕೊಂಡಿರುವುದು ಫೋಟೋಗಳಲ್ಲಿ ಕಂಡು ಬಂದಿದೆ.ಸ್ಥಳದಲ್ಲಿ ದಟ್ಟ ಕಪ್ಪು ಧೂಮ ಆವರಿಸಿಕೊಂಡಿದೆ.
ಸ್ಥಳಕ್ಕೆ ರಕ್ಷಣಾ ತಂಡಗಳು ಸೇನಾ ಹೆಲಿಕ್ಯಾಪ್ಟರ್ಗಳು,15 ಕ್ಕೂ ಹೆಚ್ಚು ಆಂಬುಲೆನ್ಸ್ಗಳು ದೌಡಾಯಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.
-ಉದಯವಾಣಿ
Comments are closed.