ರಾಷ್ಟ್ರೀಯ

ಸ್ಮತಿ ಇರಾನಿ ವಿರುದ್ಧದ ದೂರು ವಜಾ ಮಾಡಿದ ದಿಲ್ಲಿ ನ್ಯಾಯಾಲಯ

Pinterest LinkedIn Tumblr


ಹೊಸದಿಲ್ಲಿ: 2014ರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗದ ಮುಂದೆ ಸುಳ್ಳು ಘೋಷಣೆ ಸಲ್ಲಿಸಿದರೆಂದು ಕೇಂದ್ರ ಸಚಿವೆ ಸ್ಮತಿ ಇರಾನಿ ವಿರುದ್ಧ ದಾಖಲಾಗಿದ್ದ ದೂರನ್ನು ದಿಲ್ಲಿ ನ್ಯಾಯಾಲಯ ವಜಾ ಮಾಡಿದೆ.

”ದೂರು ಸಲ್ಲಿಸಿದ್ದ ಭಾರತದ ಸೋಶಲಿಸ್ಟ್‌ ಪಕ್ಷದ ದಿಲ್ಲಿ ಪ್ರದೇಶ ಉಪಾಧ್ಯಕ್ಷೆ ರೇಣು ಗಂಭೀರ್‌ ಅವರು ಕೋರ್ಟ್‌ ಗೊತ್ತು ಪಡಿಸಿದ್ದ ಅನೇಕ ದಿನಗಳಂದು ಕೋರ್ಟಿಗೆ ಹಾಜರಾಗಿಲ್ಲ; ಹಾಗಾಗಿ ಅವರ ಪ್ರಮಾಣೀಕೃತ ಹೇಳಿಕೆ ಬಾಕಿ ಇರುವುದರಿಂದ ಆಕೆ ಸಲ್ಲಿಸಿದ್ದ ದೂರನ್ನು ವಜಾ ಮಾಡಲಾಗಿದೆ” ಎಂದು ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್‌ ಮ್ಯಾನೇಜರ್‌ ಸಮರ್‌ ವಿಶಾಲ್‌ ಹೇಳಿದರು.

-ಉದಯವಾಣಿ

Comments are closed.