ಮನೋರಂಜನೆ

ಸೀಜರ್‌ನ ವಿವಾದಾತ್ಮಕ ಸಂಭಾಷಣೆ ಕಟ್‌

Pinterest LinkedIn Tumblr


ಚಿರಂಜೀವಿ ಸರ್ಜಾ ಹಾಗೂ ರವಿಚಂದ್ರನ್‌ ಅಭಿನಯಿಸಿರುವ “ಸೀಜರ್‌’ ಚಿತ್ರದ ಸಂಭಾಷಣೆಯೊಂದು ವಿವಾದಕ್ಕೆ ಕಾರಣವಾಗಿದ್ದು ಗೊತ್ತೇ ಇದೆ. ಆ ಕುರಿತು ಪರ-ವಿರೋಧದ ಚರ್ಚೆಗಳು ಜೋರಾಗಿದ್ದವು. ಈಗ ಆ ವಿವಾದಕ್ಕೆ ಕಾರಣವಾಗಿದ್ದ ಸಂಭಾಷಣೆಗೆ ಕತ್ತರಿ ಬಿದ್ದಿದೆ.

ಹೌದು, ಸಂಭಾಷಣೆಯನ್ನು ಕಿತ್ತು ಹಾಕುವಂತೆ ಸ್ವತಃ ರವಿಚಂದ್ರನ್‌ ಅವರೇ ಕಟ್ಟುನಿಟ್ಟಾಗಿ ಹೇಳಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್‌ ಕೃಷ್ಣ ಆ ಸಂಭಾಷಣೆಯನ್ನು ತೆಗೆದಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್‌ ಅವರು ಹೇಳುವ “ಗೋ ಹತ್ಯೆ ಮಾಡೋದು, ಹೆತ್ತ ತಾಯಿನಾ ತಲೆ ಹಿಡಿಯೋದು ಎರಡೂ ಒಂದೇ’ ಎಂಬ ಸಂಭಾಷಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ನಡುವೆ ನಟ ಪ್ರಕಾಶ್‌ ರೈ ಈ ಸಂಭಾಷಣೆಗೆ ಆಕ್ಷೇಪಿಸಿ, ವಿರೋಧಿಸಿದ್ದರು ಎನ್ನಲಾಗಿತ್ತು. ಆದರೆ, ನಿರ್ದೇಶಕ ವಿನಯ್‌ ಕೃಷ್ಣ, “ಚಿತ್ರದಲ್ಲಿರುವ ಸಂಭಾಷಣೆಗೂ ಪ್ರಕಾಶ್‌ ರೈ ಅವರಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದರು. ಆದರೆ, ಈಗ ರವಿಚಂದ್ರನ್‌ ಅವರೇ ಆ ಸಂಭಾಷಣೆ ಕಿತ್ತು ಹಾಕುವಂತೆ ಸೂಚಿಸಿದ್ದಾರೆ. ಇದರಿಂದಾಗಿ ನಿರ್ದೇಶಕರು ಸಂಭಾಷಣೆ ತೆಗೆದುಹಾಕಿದ್ದಾರೆ.

-ಉದಯವಾಣಿ

Comments are closed.