ಮುಂಬೈ

ಲಂಚದ ಹಣ ನುಂಗಿ ಪಾರಾಗಲು ಯತ್ನಿಸಿದ ಮಹಿಳಾ ಕಾನ್‌ಸ್ಟೆಬಲ್‌

Pinterest LinkedIn Tumblr


ಮುಂಬಯಿ : 300 ರೂ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳಾ ಕಾನ್‌ಸ್ಟೆಬಲ್‌, ಆ ಲಂಚದ ಹಣವನ್ನು ಬಾಯಿಗೆ ಹಾಕಿ ನುಂಗಿ ಪಾರಾಗಲು ಯತ್ನಿಸಿದ ಘಟನೆ ವರದಿಯಾಗಿದೆ.

ಈ ಘಟನೆ ಕೊಲ್ಹಾಪುರದ ಚಂದಗಢ ಪೊಲೀಸ್‌ ಠಾಣೆಯಲ್ಲೇ ಈ ಘಟನೆ ನಡೆಯಿತೆಂಬುದು ವಿಶೇಷ.

300 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದು ಬಳಿಕ ಅದನ್ನು ನುಂಗಲೆತ್ನಿಸಿದ ಮಹಿಳಾ ಕಾನ್‌ಸ್ಟೆಬಲ್‌ ಹೆಸರು ದೀಪಾಲಿ ಖಡ್‌ಕೆ. 28ರ ಹರೆಯದ ತರುಣನೋರ್ವ ಆಕೆಯ ವಿರುದ್ಧ ಲಂಚ ಸ್ವೀಕಾರದ ದೂರು ನೀಡಿದ್ದ. ಪಾಸ್‌ ಪೋರ್ಟಿಗಾಗಿ ಕ್ಯಾರೆಕ್ಟರ್‌ ಸರ್ಟಿಫಿಕೇಟ್‌ ಪಡೆಯಲು ಆತ ಅರ್ಜಿ ಹಾಕಿದ್ದ. ಮಹಿಳಾ ಕಾನ್‌ಸ್ಟೆಬಲ್‌ ಅದಕ್ಕಾಗಿ 300 ರೂ. ಲಂಚ ಕೇಳಿದ್ದಳು.

ಅದಾಗಿ ದೂರುದಾರ ತರುಣನು ಕೊಲ್ಹಾಪುರದ ಎಸಿಬಿ ಘಟಕವನ್ನು ಸಂಪರ್ಕಿಸಿ ದೂರು ನೀಡಿದ್ದ. ಅಂತೆಯೇ ಪೊಲೀಸ್‌ ಠಾಣೆಯ ರೆಕಾರ್ಡ್‌ ರೂಮಲ್ಲಿ ಮಹಿಳಾ ಕಾನ್‌ಸ್ಟೆಬಲ್‌ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಳು. ತಾನು ಸಿಕ್ಕಿಬಿದ್ದೆ ಎಂದು ಗೊತ್ತಾಗುತ್ತಲೇ ಆಕೆ ಲಂಚವಾಗಿ ಪಡೆದ ನೋಟುಗಳನ್ನು ಬಾಯಿಯಲ್ಲಿ ಹಾಕಿ ಜಗಿಯಲು ಆರಂಭಿಸಿದಳು. ಆದರೆ ಅದನ್ನು ನುಂಗುವ ಮೊದಲೇ ಆಕೆಯ ಲಂಚಾವತಾರ ಬಯಲಾಯಿತು ಎಂದು ವರದಿಗಳು ತಿಳಿಸಿವೆ.

-ಉದಯವಾಣಿ

Comments are closed.